ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ಮಹೋತ್ಸವ ಹಾಗೂ ಮಹಾ ರಥೋತ್ಸವ ಮಂಗಳವಾರ ಜರುಗಿತು .
ಬೆಳಿಗ್ಗೆ 7 ಘಂಟೆಗೆ ಶ್ರೀ ವೇದಮೂರ್ತಿ ಶರಣಯ್ಯ ಮಂಠೆದೇವರ ಮಠ ಅವರಿಂದ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ನಂತರ ಶರಣಬಸವೇಶ್ವರ ಭಾವಚಿತ್ರವುಳ್ಳ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಸಂಚರಿಸಿತು .ಸಾಯಂಕಾಲ ಮಹಾರಥೋತ್ಸವಕ್ಕೆ ಅಡಿಹಾಳ ಗ್ರಾಮದಿಂದ ಕಳಸ, ಬಿಸನಾಳ ದಿಂದ ನಂದಿಕೋಲು, ಹುಲ್ಲಳ್ಳಿ ಗ್ರಾಮದಿಂದ ದೇಸಾಯಿ ಮನೆತನದಿಂದ ಸಂತಕಾಯಿ , ಕಮದತ್ತ ಗ್ರಾಮದಿಂದ ಬಾಳೇಕಂಬ ತಳಿರು ತೋರಣ, ಕೆಂಗಲ್ಲ ಕಡಪಟ್ಟಿ ಗ್ರಾಮದಿಂದ ಹಗ್ಗದ ಮೇರವಣಿಗೆ ಮೂಲಕ ಸ್ವಾಗತಿಸಿ , ಸಾಯಂಕಾಲ 5:30 ಘಂಟೆಗೆ ಶ್ರೀ ಶರಣಬಸವೇಶ್ವರ ರಥೋತ್ಸವ ಜರುಗಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಿಲ್ ಕೆರೂರದ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಹಾಗೂ ಇಂಗ್ಳೇಶ್ವರದ ಶ್ರೀ ಶ್ರೀ ಚನ್ನವಿರ ಮಹಾ ಸ್ವಾಮಿಗಳು ಆಗಮಿಸಿ ಆಶೀರ್ವದಿಸಿದರು, ನಂತರ ರಾತ್ರಿ 10:30 ಘಂಟೆಗೆ ಶ್ರೀ ಶರಣಬಸವೇಶ್ವರ ನಾಟ್ಯ ಸಂಘ ವತಿಯಿಂದ , ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ , (ಅರ್ಥಾತ್) ಮಾಂಗಲ್ಯ ಉಳಿಸಿದ ಮೈದುನ ಎಂಬ ಸುಂದರ ಸಾಮಾಜಿಕ ನಾಟಕ ಜರುಗಿತು .ಜಾತ್ರೆಯಲ್ಲಿ ಇದ್ದಲಗಿ ಗ್ರಾಮದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿದ್ದರು
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ