December 21, 2024

Bhavana Tv

Its Your Channel

ಶ್ರೀ ಹನುಮಾನ್ ಮಂದಿರದಲ್ಲಿ ಭಜನಾ ಕಾರ್ಯಕ್ರಮ

ಬಾಗಲಕೋಟೆ: ತಾಳಿಕೋಟೆ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಹನುಮಾನ್ ಮಂದಿರ ದಲ್ಲಿ ಪ್ರತಿ ಶನಿವಾರ ಭಜನಾ ಕಾರ್ಯಕ್ರಮ ಜರುಗುತ್ತದೆ ನಗರದ ಎಲ್ಲ ಬಡಾವಣೆ ನಿವಾಸಿಗಳು ಸೇರಿ ಪ್ರತಿ ಶನಿವಾರ 7 ಗಂಟೆಯಿAದ ಎಂಟು ಗಂಟೆ ತನಕ ಸತ್ಸಂಗವನ್ನು ಪ್ರಾರಂಭಿಸುತ್ತಾರೆ ಆಧ್ಯಾತ್ಮ ಅನ್ನೋದು ಜೀವನಕ್ಕೆ ಪ್ರಮುಖವಾದ ಅಂಶ ಆಧ್ಯಾತ್ಮಿಕತೆಯಿಂದ ಬದುಕಿದ ಸಂತರನ್ನು ನೋಡಿ ನಾವು ಕಲಿಯಬೇಕಿದೆ ಎಂದು ವಸಂತ ಜೋಶಿ ಗುಂಡ ಭಟ್ಟಾಚಾರ್ಯ ಹಾಗೂ ಆನಂದ್ ಕುಲಕರ್ಣಿ ಹೇಳಿದರು

ಈ ಭಜನಾ ಕಾರ್ಯಕ್ರಮದಲ್ಲಿ ವಂದೇ ಮಾತರಂ ಯೋಗ ಕೇಂದ್ರದ ಬಾಪುಗೌಡ ವಂದಲಿ, ತಾಳಿಕೋಟೆ ನಗರದ ಬಜರಂಗದಳ ಅಧ್ಯಕ್ಷ ಪ್ರಮೋದ ಅಗರ್ವಾಲ್ ಹಾಗೂ ತಾಳಿಕೋಟೆ ನಗರದ ಪಿ ಎಸ್ ಐ ನ ಮನೆಯವರು ಹಾಗೂ ವಿಶ್ವನಾಥ್ ಹಂಚಾಟೆ, ಎ ಜಿ ಹೂಗಾರ, ಅಮೋಘ ಕುಲಕರ್ಣಿ, ,ಅನುಶ್ರೀ ಕುಲಕರ್ಣಿ ಮೀನಾಕ್ಷಿ ಮಾಮನಿ ಹಾಗೂ ವಿಶೇಷವಾಗಿ ಭಜನಾ ಕಾರ್ಯಕ್ರಮವನ್ನು ಕೇಳಲು ಪೂನಾ ದಂಪತಿಗಳು ಆಗಮಿಸಿದ್ದರು

ಅಲ್ಲದೆ ಪ್ರತಿ ಶನಿವಾರ ಇಲ್ಲಿ ಭಜನಾ ಕಾರ್ಯಕ್ರಮ ಜರುಗಲಿದ್ದು ಸಕಲ ಸದ್ಭಕ್ತರು ಆಗಮಿಸಬೇಕೆಂದು ಘೋಷಣೆಯನ್ನು ಮಾಡಿದರು

error: