ಬಾಗಲಕೋಟ ಜಿಲ್ಲೆಯ ಹುನಗುಂದ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕಾ ಅಧ್ಯಕ್ಷರಾಗಿ ಚಂದ್ರು ಗಂಗೂರ ಪ್ರಧಾನ ಕಾರ್ಯದರ್ಶಿಯಾಗಿ ಸಂಗಮೇಶ ಹೂಗಾರ ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕಾ.ನಿ.ಪ ಸಂಘದ ನಡೆದ ಚುನಾವಣೆಯಲ್ಲಿ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಯಿತು. ಪತ್ರಕರ್ತರಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಆನಂದ ದಲಬಂಜನ ,ಉಪಾಧ್ಯಕ್ಷ ಉಮೇಶ ಪೂಜಾರ, ರಾಜ್ಯ ಸಮಿತಿ ಸದಸ್ಯ ಮಹೇಶ ಅಂಗಡಿ, ಸಮನ್ವಯ ಸಮಿತಿ ಸದಸ್ಯರಾದ ಈಶ್ವರ ಶೆಟ್ಟರ್, ಸುಭಾಷ ಹೊದ್ಲೂರ, ಚುನಾವಣಾ ವೀಕ್ಷಕರಾಗಿ ಆಗಮಿಸಿ ಫಲಿತಾಂಶ ಪ್ರಕಟಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಬಂಜನ ಮಾತನಾಡಿ ಜಿಲ್ಲೆಯಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಸಂಘಟನೆಗೆ ಜವಾಬ್ದಾರಿಯಿಂದ ತಾಲೂಕಾ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಹಿರಿಯ ಪತ್ರಕರ್ತ ಅಮರೇಶ ನಾಗೂರ ಪ್ರಸ್ತಾವಿಕ ಮಾತನಾಡಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರಿಗೆ ಪಿಂಚಣೆ ಸೌಲಭ್ಯೆ ಆರೋಗ್ಯ ವಿಮೆ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಜಿಲ್ಲೆ ಮತ್ತು ರಾಜ್ಯ ಸಮಿತಿಯವರು ಸೌಲಭ್ಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕಮೀಟಿ ಸದಸ್ಯ ರಿಯಾಜ ಸರಕಾವಸ, ನಿಕಟಪೂರ್ವ ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಬಂಡರಗಲ್ಲ, ಗುರು ಹಿರೇಮಠ, ಹರ್ಷ ದೇಸಾಯಿ, ಶರಣು ಹಳಪೇಟಿ ಉಪಾಧ್ಯಕ್ಷಗಳಾಗಿ, ಬಸವರಾಜ ಬಡಿಗೇರ (ಖಜಾಂಚಿ), ಇಬ್ರಾಹಿಂ ನಾಯಕ ಸಹಕಾರ್ಯದರ್ಶಿ ಅವಿರೋಧ ಆಯ್ಕೆ ಮಾಡಲಾಯಿತು.
ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜನ ದರಗಾದ, ಬಸವರಾಜ ಕಮ್ಮಾರ, ಮಹಾಂತೇಶ ತೋಪಲಕಟ್ಟಿ, ಮಲ್ಲಿಕಾರ್ಜನ ಹೊಸಮನಿ, ರಮೇಶ ತಾರಿವಾಳ, ಆದಪ್ಪ ಸುಂಕದ, ಸಂಗಮೇಶ ಸಿನ್ನೂರ, ರವಿ ದೇಶಪಾಂಡೆ, ಅಶೋಕ ಸಿಂಗದ, ಬಸವರಾಜ ನಿಡಗುಂದಿ, ಎಫ್.ಎಂ.ಪಿAಜಾರ, ಉಪಸ್ಥಿತರಿದ್ದರು.
ವರದಿ ನಿಂಗಪ್ಪ ಕಡ್ಲಿಮಟ್ಟಿ ಕಮತಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ