December 19, 2024

Bhavana Tv

Its Your Channel

ಅಸಂಘಟಿತ ಕಾರ್ಮಿಕ ಮತ್ತು ನೌಕರರ ವಿಭಾಗದ ಅಧ್ಯಕ್ಷರಾಗಿ ಲಕ್ಷ್ಮಣ ದ್ಯಾಮಣ್ಣವರ ಆಯ್ಕೆ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಅಸಂಘಟಿತ ಕಾರ್ಮಿಕ ಮತ್ತು ನೌಕರರ ವಿಭಾಗದ ಅಧ್ಯಕ್ಷರಾಗಿ ಕಮತಗಿ ಪಟ್ಟಣದ ಲಕ್ಷ್ಮಣ ದ್ಯಾಮಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷರಾದ ಜಿಎಸ್ ಮಂಜುನಾಥ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕರಾದ ಎಚ್ ವೈ ಮೇಟಿ, ಜಿಲ್ಲಾಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಮುರುಗೇಶ್ ಕಡ್ಲಿಮಟ್ಟಿ ಅವರ ನೇತೃತ್ವದಲ್ಲಿ ಪ್ರಮಾಣ ಪತ್ರ ನೀಡಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕೆಂದು ಕಾಂಗ್ರೆಸ್ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಅವರು ಮನವಿ ಮಾಡಿದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: