ವರದಿ; ವೇಣುಗೋಪಾಲ ಮದ್ಗುಣಿ
ಅಮಿನಗಡ : “ವಿಶ್ವ ಬಂಜಾರ ಕಲಾ ಸಾಹಿತಿಕ ಸಂಘ (ರಿ) ಅಮಿನಗಡ” ವತಿಯಿಂದ ರಾಜ್ಯಮಟ್ಟದ “ಬಂಜಾರ ಸಾಹಿತ್ಯ ಸೇವಾ ರತ್ನ” ಪ್ರಶಸ್ತಿ ಹಾಗೂ ರಾಜ್ಯಮಟ್ಟದ ‘ಬಂಜಾರ ಕವಿಗೋಷ್ಠಿ’ ಕಾರ್ಯಕ್ರಮವು ಅಮಿನಗಡದ ‘ಶ್ರೀ ವೆಂಕಟೇಶ್ವರ’ ಕಲ್ಯಾಣ ಮಂಟಪದಲ್ಲಿ ಜರುಗಿತು.
. ‘ಬಂಜಾರ ಶಕ್ತಿಪೀಠ ನೀಲಾ ನಗರದ’ “ಶ್ರೀ ”ಕುಮಾರ ಮಹಾರಾಜರು” ಹಾಗೂ ‘ವಿಜಯ ಮಹಾಂತೇಶ ಶಾಖಾ ಮಠ ಲಿಂಗಸೂರಿನ “ಸಿದ್ದಲಿಂಗ ಮಹಾ ಸ್ವಾಮಿಗಳು” ದಿವ್ಯ ಸಾನಿಧ್ಯವಹಿಸಿ “ಸಂತ ಸೇವಾಲಾಲ್” ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಶೀರ್ವಚನ ನೀಡಿದರು.
‘ಬಂಜಾರ ಭಾಷಾ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರ ಕನ್ನಡ ವಿಶ್ವವಿದ್ಯಾಲಯ ಹಂಪಿಯ’ ನಿರ್ದೇಶಕರಾದ “ಡಾ. ಸಣ್ಣ ರಾಮ ರವರು ಕಾರ್ಯಕ್ರಮ ಉದ್ಘಾಟಿಸಿ “ಯಾವುದೇ ಸಮಾಜವನ್ನು ತ್ತಿದ್ದಲು,ಆ ಸಮಾಜವನ್ನು ಸರಿದಾರಿಗೆ ತರಲು ಕಾವ್ಯ ಮತ್ತು ಕವಿತೆ ತುಂಬಾ ಪರಿಣಾಮಕಾರಿಯಾಗಿರುತ್ದೆ ಎಂದು ಹೇಳುತ್ತಾ ಕಾವ್ಯ ಮತ್ತು ಕವಿತೆಯ ಮಹತ್ವವನ್ನು ತಿಳಿಸಿಕೊಟ್ಟರು.ಹಾಗು
“ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ’ ಸದಸ್ಯರಾದ ಇಂದುಮತಿ ಲಮಾಣಿ”ಯವರು ವಹಿಸಿದರು.ಮತ್ತು ಮುಖ್ಯ ಅತಿಥಿಗಳಾಗಿ”ಡಾ. ನಾರಾಯಣ್ ಪವಾರ್” ‘ಮುಖ್ಯಸ್ಥರು ಕನ್ನಡ ವಿಭಾಗ ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ, ಕಿಶೋರ್ ಕುಮಾರ್ ನಾಯಕ್ ಆಪ್ತ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆ ಬೆಂಗಳೂರು ರಮೇಶ ಚವಾಣ, ಬೇಬಿ ಚವಾಣ, ಯೋಗೇಶ್ ಲಮಾಣಿ, ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ೨೫ ಕವಿಗಳು ತಮ್ಮ ಬಂಜಾರ ಕವಿತೆಯನ್ನು ವಾಚನ ಮಾಡಿದರು ಈ ಸಂದರ್ಭದಲ್ಲಿ,ಸಮಾಜದ ‘ಜೇನು ನಾಯ್ಕ’ ರವರು ಬರೆದಿರುವ”ದಲೆರೋ ಝುಲ್ಕೋ”ಹಾಗೂ ‘ರವಿ ಎಸ್ ಕೊಡಾವತ’ರವರು ಬರೆದಿರುವ “ಮಾರ್ ದಲೇರ ಬೋಲಿ”ಮತ್ತು ‘ಎನ್ ಮಿಠ್ಯಾ ನಾಯ್ಕ’ ರವರು ಬರೆದಿರುವ”ಮನ ಮಾರ ಭೇನ” ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಚಂದ್ರಕಾAತ ಚವಾಣ್ ಅಧ್ಯಕ್ಷರು ಎಲ್ಲರೂ ಸರ್ವರನ್ನು ಸ್ವಾಗತಿಸಿದರು, ಎಚ್ ವೈ ರಾಠೋಡ್ ರವರು ಮಾತನಾಡಿದರು, ಜ್ಯೋತಿ ನಾಯ್ಕರವರು ಕಾರ್ಯಕ್ರಮ ನಿರ್ವಹಿಸಿದ್ದರೆ ,ಶ್ರೀಖಂಡು ನಾಯ್ಕ ರವರು ಎಲ್ಲರನ್ನು ವಂದಿಸಿದರು.
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ