December 21, 2024

Bhavana Tv

Its Your Channel

ಮಳೆಗೆ ಮನೆ ಕುಸಿತ, ಬಡ ನೇಕಾರನ ಗೋಳು ಆಲಿಸಿದ ಶಾಸಕ ಸಿದ್ದು ಸವದಿ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ವಾಡ್ ೯ ನಂ ೪ ರ ನಿವಾಸಿ ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರ ಹನುಮಂತ ಮಂಕಣಿ ಅವರ ಮನೆ ಕುಸಿದು ಕಂಗಾಲಾಗಿ ಗೋಳಾಡಿದ ವರದಿ ಮಾಧ್ಯಮದಲ್ಲಿ ಕಂಡ ಕೈಮಗ್ಗ ನಿಗಮದ ಅಧ್ಯಕ್ಷರು ಹಾಗೂ ತೇರದಾಳ ಶಾಸಕರಾದ ಸಿದ್ದು ಸವದಿ ತ್ವರಿತಗತಿಯಲ್ಲಿ ನೇಕಾರನ ಕುಸಿದ ಮನೆಗೆ ಭೇಟಿ ಹಾನಿಯಾದ ನೂಲು,ಭೀಮು,ಸೇರಿದಂತೆ ವಾಸ್ತವ ಸ್ಥಿತಿ ಪರಿಶೀಲಿಸಿದರು.

ಬಡ ನೇಕಾರ ಹನುಮಂತ ಮಂಕಣಿ ಅವರ ಕುಸಿದ ಮನೆ ಸಂಪೂರ್ಣ ಶಿಥಿಲಾವಸ್ಥೆ ಸ್ಥಿತಿಯಲ್ಲಿ ಇರುವುದರಿಂದ ಸದ್ಯ ವಾಸಕ್ಕೆ ಸಾಧ್ಯವಿಲ್ಲ ಕೂಡಲೇ ಮನೆಯ ಸಂಪೂರ್ಣ ಕಟ್ಟಡಕ್ಕೆ ಯೋಜನೆ ರೂಪಿಸಿ ಸಿದ್ದ ಪಡಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು. ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರ ಮನೆಗಳು ಧಾರಾಕಾರ ಮಳೆಗೆ ಕುಸಿದಿರುವ ಪ್ರಕರಣ ನಿಗಮಕ್ಕೆ ಹೊಸ ಪ್ರಸ್ತಾವನೆಯಂತಾದರು ನಿಗಮದಿಂದಲೂ ಅಲ್ಪ ಮಟ್ಟದ ನೆರವು ನೀಡಲು ಚರ್ಚಿಸಲಾಗುದೆಂದರು. ಇದೇ ವೇಳೆ ಜಿಲ್ಲಾ ಭಾಜಪ ಮುಖಂಡರಾದ ಮೋಹನ್ ಜಾಧವ, ಸ್ಥಳೀಯ ಮುಖಂಡರಾದ ಸಂಗಪ್ಪ ಗಾಣೇಗೇರ್, ಗಂಗಾಧರ ಗೌಡರ,ಮಹೇಶ್ ಅಚನೂರ, ಗುರುಪಾದಪ್ಪ ಕಡ್ಲಿಮಟ್ಟಿ, ವಿಜಯಕುಮಾರ್ ಭಾಪ್ರಿ, ರಮೇಶ್ ಹಿರಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: