December 21, 2024

Bhavana Tv

Its Your Channel

ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಕೈಸರ್ ಜಹಾ ಮಿರ್ಜಿ ರಾಜ್ಯಮಟ್ಟಕ್ಕೆ ಆಯ್ಕೆ

ಬಾಗಲಕೋಟ ಜಿಲ್ಲೆಯ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕೈಸರ್ ಜಹಾ ಮಿರ್ಜಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾಳೆ.

ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಮ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ಹಾಗೂ ಗೌರವಾನ್ವಿತ ಆಡಳಿತ ಮಂಡಳಿಯ ಸದಸ್ಯರು ಆಡಳಿತ ಅಧಿಕಾರಿಗಳು ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಹುನಗುಂದ ತಾಲೂಕ್ ಪದವಿ ಪೂರ್ವ ಕಾಲೇಜುಗಳ ಎಸ್ ವಿ ವಿ ಪಿ ನೋಡಲ್ ಅಧಿಕಾರಿಗಳಾದ ಶ್ರೀ ಬಿ ವಿ ಬೀರಕಬ್ಬಿ ತಿಳಿಸಿದ್ದಾರೆ

ವರದಿ ನಿಂಗಪ್ಪ ಕಡ್ಲಿಮಟ್ಟಿ

error: