December 20, 2024

Bhavana Tv

Its Your Channel

ಶ್ರೀ ಲಿಂಗೈಕ್ಯ 12ನೇ ಹುಚ್ಚೇಶ್ವರ ಮಹಾಸ್ವಾಮಿಗಳವರ ಪುಣ್ಯಸ್ಮರಣೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಲಿಂಗೈಕ್ಯ 12ನೇ ಹುಚ್ಚೇಶ್ವರ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯನ್ನು ಆಚರಿಸಿದರು

ಬೆಳಿಗ್ಗೆ ನಸುಕಿನ ಜಾವ 6:00 ಗಂಟೆಗೆ ಕತೃ ಗದ್ದುಗೆಗೆ ಮಹಾಭಿಷೇಕ ಮಹಾಮಂಗಳಾರತಿ ನೆರವೇರಿತು 12ನೇ ಹುಚ್ಚೇಶ್ವರ ಮಹಾಸ್ವಾಮಿಯವರು ಸರಳತೆ ಹಾಗೂ ಸಹಜ ಜೀವನ ಮತ್ತು ಆಧ್ಯಾತ್ಮ ದಾಸೋಹ ಕಾಯಕ ಮೌಲ್ಯಗಳನ್ನು ಅಳವಡಿಸಿಕೊಂಡ ಕಾಯಕಯೋಗಿ ಇವರಾಗಿದ್ದರು. ಶ್ರೀ ಹುಚ್ಚೇಶ್ವರ ಮಠ ಸುಮಾರು 800 ವರ್ಷಗಳ ಹಿಂದಿನ ಇತಿಹಾಸ ಇರುತ್ತದೆ ಈ 12ನೇ ಹುಚ್ಚೇಶ್ವರ ಮಹಾಸ್ವಾಮಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಅಸಕ್ತಿಯಿಂದ ಬಡತನದ ದಾರಿದ್ರವನ್ನು ಹೋಗಲಾಡಿಸಲು ಕಮತಗಿಯ ಗ್ರಾಮದಲ್ಲಿ ಗ್ರಾಮದ ಸಮಸ್ತ ಸರ್ವಧರ್ಮಗಳ ಹಿರಿಯರ ಸಹಾಯದಿಂದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು ಹಾಗೂ ಇಷ್ಟೆ ಅಲ್ಲದೆ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗಾಗಿ ಅನ್ನದಾಸೋಹವನ್ನು ನೆರವೇರಿಸಿದ ಶ್ರೀಗಳು ಇವರಾಗಿದ್ದರು ಅಂದಿನಿAದ ಇಲ್ಲಿಯವರೆಗೂ ಶ್ರೀ 13ನೇ ಹುಚ್ಚೇಶ್ವರ ಮಹಾಸ್ವಾಮಿಗಳವರು ಅನ್ನದಾಸೋಹವನ್ನು ನಡೆಸಿಕೊಂಡು ಬಂದಿದ್ದಾರೆ ಹಾಗೂ 12ನೇ ಹುಚ್ಚೇಶ್ವರ ಮಹಾಸ್ವಾಮಿಗಳವರ ಭಾವಚಿತ್ರವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಹಾಗೂ ಮಹಾಸ್ವಾಮಿಗಳವರ ಕಾರ್ಯಕ್ರಮದ ಅಂಗವಾಗಿ ಪೂಜ್ಯಶ್ರೀ 13ನೇ ಶ್ರೀ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ಅಧ್ಯಕ್ಷರು ಶ್ರೀ ಹುಚ್ಚೇಶ್ವರ ವಿದ್ಯಾ ವರ್ಧಕ ಸಂಘ ಕಮತಗಿ ಇವರ ಅಮೃತ ಹಸ್ತದಿಂದ 2023ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಶಿಕ್ಷಕರು ಮತ್ತು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು

error: