December 21, 2024

Bhavana Tv

Its Your Channel

ಶ್ರೀ ಮಹಾಯೋಗಿ ವೇಮನರ 611ನೇ ಜಯಂತ್ಯೋತ್ಸವ ಆಚರಣೆ

ಬಾಗಲಕೋಟೆ ಜಿಲ್ಲೆ. ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದಲ್ಲಿ ತತ್ವಜ್ಞಾನಿ ಶ್ರೀ ಮಹಾಯೋಗಿ ವೇಮನರ 611ನೇ ಜಯಂತ್ಯೋತ್ಸವದ ಪ್ರಯುಕ್ತ ಮಹಾಯೋಗಿ ವೇಮನರ ಭಾವಚಿತ್ರದೊಂದಿಗೆ ಮರೋಳ ಗ್ರಾಮದ ಸಮಸ್ತ ರೆಡ್ಡಿ ಭಾಂದವರು ಹಾಗೂ ಮಹಿಳೆಯರು ಕುಂಬ ಕಳಸ ಹೊತ್ತು ವಾದ್ಯದೊಂದಿಗೆ ವೇಮನರ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಈ ಮೆರವಣಿಗೆಯಲ್ಲಿ ಹೇಮ ವೇಮ ಯುವಕ ಸಂಘ ರಿ ಮರೋಳ ಇದರ ಅಧ್ಯಕ್ಷರಾದ ಅಮರಗೌಡ ಬ ಪಾಟೀಲ್ ,ಉಪಾಧ್ಯಕ್ಷರಾದ ಅಂದನಗೌಡ ಶಿಂಗನಗುತ್ತಿ ,ಗೌರವ ಅಧ್ಯಕ್ಷರಾದ ಅಶೋಕಗೌಡ ಬಂಡರಗಲ್ಲ ,ಮಹಾಂತೇಶ ಗೊರಬಾಳ,ಮುತ್ತಪ್ಪ ಹುಡೆದಗಡ್ಡಿ , ರಾಜು ಗೊರಬಾಳ ,ವಿನಾಯಕ ಕಂದಗಲ್ಲ ಹಾಗೂ ಮರೊಳ ಗ್ರಾಮದ ಸಮಸ್ತ ರೆಡ್ಡಿ ಸಮಾಜದ ಯುವಕರು ಗುರು ಹಿರಿಯರು ಭಾಗವಹಿಸಿದ್ದರು..

ವರದಿ: ಮಹಾಂತೇಶ ಬಾಗಲಕೋಟೆ

error: