December 21, 2024

Bhavana Tv

Its Your Channel

ಎಚ್ ಪಿ ಎಲ್ ಸೀಸನ್ 4 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ಎಸ್ ಆರ್ ನವಲಿಹಿರೇಮಠ

ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಹೇರೂರ ಗ್ರಾಮದಲ್ಲಿ ನ್ಯೂ ಜಗದೀಶ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಹೇರೂರ ಹಾಗೂ ಎಸ್ ಆರ್ ಎನ್ ಫೌಂಡೇಶನ್ ಸಹಯೋಗದಲ್ಲಿ ಎಚ್ ಪಿ ಎಲ್ ಸೀಸನ್ 4 ಕ್ರಿಕೆಟ್ ಟೂರ್ನಮೆಂಟ್ ಸಮಾರಂಭವನ್ನು ಹುನಗುಂದ ಮತಕ್ಷೇತ್ರದ ಜನನಾಯಕರಾದ ಎಸ್ ಆರ್ ನವಲಿಹಿರೇಮಠರು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಶರಣ ಹಾಗೂ ಸರಿಗಮಪ ಖ್ಯಾತಿಯ ವಸುಶ್ರೀ ಹಳೆಮನಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹೇರೂರ ಗ್ರಾಮದ ಗುರು-ಹಿರಿಯರು ಯುವಕ ಮಿತ್ರರು ಹಾಗೂ ಎಸ್ ಆರ್ ಎನ್ ಅಭಿಮಾನಿ ಬಳಗದ ಮುಖಂಡರು ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ವರದಿ ಮಹಾಂತೇಶ.ಕುರಿ

error: