December 21, 2024

Bhavana Tv

Its Your Channel

ಕಮತಗಿಯಲ್ಲಿ ಶ್ರೀ ದಾನಮ್ಮ ದೇವಿಯ 31ನೇ ವಾರ್ಷಿಕೋತ್ಸವ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದ 31ನೇ ವಾರ್ಷಿಕೋತ್ಸವ ವಿಜ್ರಂಬಣೆಯಿAದ ನಡೆದವು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರೀ ದಾನಮ್ಮ ದೇವಿಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ವಾರ್ಷಿಕೋತ್ಸವ ನಿಮಿತ್ತ ಶ್ರೀ ಶಂಕರಲಿAಗ ದೇವಸ್ಥಾನದಲ್ಲಿ ದಾನಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಹಿಡಿದು ನೆಡೆದರು. ವಿವಿಧ ವಾದ್ಯ ಮೇಳ, ಹಾಗೂ ಕುದುರೆ ಕುಣಿತ ಗಮನಸೆಳೆದವು.
ಭಕ್ತಾಧಿಗಳು ಮಹಾ ಅನ್ನಸಂತರ್ಪಣೆಯಲ್ಲಿ ಭಾಗಿಯಾದರು, ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲ ಗುರುಹಿರಿಯರು ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಎಲ್ಲ ಸಮುದಾಯದ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: