December 21, 2024

Bhavana Tv

Its Your Channel

ನಾಳೆ ಕಮತಪುರ ಉತ್ಸವ- ೨೦೨೩

ಬಾಗಲಕೋಟ ಜಿಲ್ಲೆಯ ಹುನುಗುಂದ ತಾಲೂಕಿನ ಕಮತಪುರ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ ಕಮತಪುರ ಉತ್ಸವ ೨೦೨೩ನೇ ನಮ್ಮ ಜನ ನಮ್ಮ ಪರಂಪರೆ ಉತ್ಸವವು ಫೆಬ್ರುವರಿ ೧೧ನೇ ತಾರೀಖಿನಿಂದ ಎರಡು ದಿನದ ಕಾರ್ಯಕ್ರಮವು ಎಲ್ಲ ಊರಿನ ಎಲ್ಲ ಸಮಾಜದ ಗುರುಹಿರಿಯರ ಸಮ್ಮುಖದಲ್ಲಿ ಕಮತಪುರದ ಹೊಳೆ ಹುಚ್ಚೇಶ್ವರ ಜಾತ್ರೆಯು ಬಹಳ ವಿಜೃಂಭಣೆಯಿAದ ನಡೆಸುವುದಾಗಿ ಹೇಳಿದರು

ಫೆಬ್ರುವರಿ ೧೧ ಶನಿವಾರದಂದು ಮುಂಜಾನೆ ೫:೦೦ ಗಂಟೆಗೆ ಲಘು ರಥೋತ್ಸವ ಎಳೆಯುವುದರ ಮುಖಾಂತರ ಚಾಲನೆ ನೀಡುವುದು ಮತ್ತು ಸಿಡಿಮದ್ದು ಕಾರ್ಯಕ್ರಮ ಇರುವುದೆಂದು ತಿಳಿಸಿದರು ಹಾಗೂ ಮುಂಜಾನೆ ೯.೩೦ ಗಂಟೆಗೆ ಕಳಸದ ಮೆರವಣಿಗೆಯು ವಿಭಿನ್ನ ವಾದ್ಯ ಮೇಳಗಳೊಂದಿಗೆ ಹಾಗೂ ಜಾನಪದ ಕಲಾತಂಡದಿAದ ಮತ್ತು ಅಶ್ವಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಠಕ್ಕೆ ಬಿಂಜಗೈಯುವುದು ಹಾಗೂ ಸಾಯಂಕಾಲ ೫:೩೦ ಗಂಟೆಗೆ ನಾಡಿನ ಸಮಸ್ತ ಹರ ಗುರು ಚರಮೂರ್ತಿಗಳು ಪರಮ ಪೂಜ್ಯರ ಮತ್ತು ಸಮಸ್ತ ಭಕ್ತ ಸಮೂಹದ ಮಧ್ಯ ಶ್ರೀಮಠದ ರಥ ಬೀದಿಯಲ್ಲಿ ಬಂಗಾರದ ಕಳಸ ಹೊತ್ತ ಶ್ರೀ ಹೊಳೆ ಹುಚ್ಚೇಶ್ವರ ಮಹಾ ರಥೋತ್ಸವ ಜರಗುವುದು ಈ ಕಾರ್ಯಕ್ರಮದೊಂದಿಗೆ ಸಾಯಂಕಾಲ ೬:೦೦ಗೆ ಸಂಗಪ್ಪ ಬಸಪ್ಪ ಲಾಯದಗುಂದಿ ಪ್ರಧಾನ ವೇದಿಕೆಯಿಂದ ಕಾರ್ಯಕ್ರಮಕ್ಕೆ ಉದ್ಘಾಟನಾದೊಂದಿಗೆ ಸಮಾರಂಭ ಪ್ರಾರಂಭಗೊಳ್ಳುವುದು ಎಂದು ಹೇಳಿದರು ಹಾಗೂ ಸಾಯಂಕಾಲ ೫:೩೦ಕ್ಕೆ ವಚನ ಸಂಗೀತ ಬಸವರಾಜ ಸಿಂದಗಿಮಠ ಸೋಮಣ್ಣ ಹಂಪಣ್ಣ ಗಡೆಯದಗೌಡ್ರು ಹಾಗೂ ೬:೩೦ ಗಂಟೆಗೆ ತನ್ವಿ ಪ್ರಭುರಾಜ್ ಕಲ್ಯಾಣಿ ಬೆಂಗಳೂರು ಇವರ ವತಿಯಿಂದ ಭರತನಾಟ್ಯ ಹಾಗೂ ಏಳು ಗಂಟೆಗೆ ವಿವಿ ಪಿ ಸಮಿತಿಯ ಶಾಲೆ ನರೇಗಲ್ ಇವರಿಂದ ಜಾನಪದ ಗೀತೆಗಳು ಹಾಗೂ ಎರಡು ದಿನದ ಕಾರ್ಯಕ್ರಮವನ್ನು ಎಲ್ಲ ಭಕ್ತಾದಿಗಳು ಶಾಂತಿ ಸೌಹಾರ್ದದಿಂದ ನಡೆಸಿಕೊಡಬೇಕೆಂದು ಶ್ರೀಗಳು ಹೇಳಿದರು.

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: