December 21, 2024

Bhavana Tv

Its Your Channel

ಶ್ರೀಶೈಲ ಪಾದಯಾತ್ರಿಕರಿಗೆ ಅನ್ನ ಸಂತರ್ಪಣೆ

ಬಾಗಲಕೋಟೆ: ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಜರುಗುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ಬಾಗಲಕೋಟೆ ಜಿಲ್ಲೆಯಿಂದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಹೋಗುವುದು ಸಂಪ್ರದಾಯ. ಹೀಗೆ ಶ್ರೀಶೈಲಕ್ಕೆ ತೆರಳುತ್ತಿರುವ ಪಾದಯಾತ್ರಿಗಳಿಗೆ ಜಿಲ್ಲೆಯ ಕಮತಗಿ ಪಟ್ಟಣದ ಹೂರವಲಯದ ಶ್ರೀ ವೀರೇಶ್ವರ ಮಠದಲ್ಲಿ ಕಮತಗಿ ಸದ್ಭಕ್ತ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಕಮತಗಿಯ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಇದೇ ವೇಳೆ ಭಕ್ತರಿಗೆ ಬಿಸಿನೀರು, ಉಚಿತ ವೈದ್ಯಕೀಯ, ವಸತಿ ಸೇವೆ ಆಯೋಜಿಸಲಾಗಿತ್ತು.

ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಪಾದಯಾತ್ರಿಗಳಿಗೆ ಹಾಲು ವಿತರಣೆ ಮಾಡಿದರು.

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: