December 19, 2024

Bhavana Tv

Its Your Channel

ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ

ಕಮತಗಿ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಶಾಖಾಂಬರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಮತಗಿಯ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು ಅಧ್ಯಕ್ಷತೆ ವಹಿಸಿದ್ದ ಶಾಖಾಂಬರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ ಎಲ್ ನಾಯಕ್ ಪ್ರಾಚೀನಕಾಲದಿಂದಲು ಶಿಕ್ಷಣಕ್ಕೆ ಅದರದೆ ಆದ ಒಂದು ಮಹತ್ವವಿದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಶಿಕ್ಷಿತರಾಗಬೇಕು ಎಂದು ಕಿವಿಮಾತು ಹೇಳಿದರು.ಸನ್ಮಾನ ಸ್ವೀಕರಿಸಿದ ಆರ್ ಎಸ್ ಲೆಕ್ಕದ ಅವರು ಶಿಕ್ಷಣವೆಂಬುದು ಅಮೂಲ್ಯವಾದುದು ಭೂಮಿಯ ಮೇಲೆ ಶಿಕ್ಷಣ ದೊರಕುವುದು ಕೇವಲ ಮನುಷ್ಯನಿಗಷ್ಟೆ ಅದನ್ನು ಸಮರ್ಥವಾಗಿ ರೂಢಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿ ಆರ್ ಚೌವ್ಹಾಣ್ ನಿವೃತ್ತ ಮುಖ್ಯಗುರುಗಳು, ಸ್ವಾಮಿ ವಿವೇಕಾನಂದರ ಜೀವನ ಆದರ್ಶ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ವ್ಯಕ್ತಿತ್ವ ವಿದ್ಯಾರ್ಥಿಗಳು ಜೀವನದಲ್ಲಿ ರೂಢಿಸಿಕೊಂಡಾಗ ವಿದ್ಯಾರ್ಥಿ ಜೀವನ ಸಾರ್ಥಕ ಎಂದರು.ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಹೇಶ್ ಅಚನೂರು ಕಾರ್ಯಕ್ರಮ ಉದ್ಘಾಟಿಸಿದರು.
ಬಾಗಲಕೋಟ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೇಶ್ ಬಿಜಾಪುರ್ ಅತಿಥಿಗಳಾಗಿ ಭಾಗವಹಿಸಿದ್ದರು. ಹೆಜ್ಜೆ ಫೌಂಡೇಶನ್ ಪದಾಧಿಕಾರಿಗಳು ಮತ್ತು ಶ್ರೀ ಶಾಖಾಂಬರಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೆಜ್ಜೆ ಫೌಂಡೇಶನನ ಕಾರ್ಯದರ್ಶಿ ಶಂಕರ್ ವನಕಿ ಪ್ರಾಸ್ತಾವಿಕ ಮಾತನಾಡಿದರು ಜಂಪಣ್ಣ ಸಿರಗುಂಪಿ ಸ್ವಾಗತಿಸಿದರು, ವೀರಭದ್ರಪ್ಪ ಮುರಾಳ ವಂದಿಸಿದರು.
ವರದಿ ; ನಿಂಗಪ್ಪ ಕೆ, ಬಾಗಲಕೋಟೆ.

error: