December 21, 2024

Bhavana Tv

Its Your Channel

ಬೆಚ್ಚಿಬಿದ್ದ ಬೆಂಗಳೂರು: ಒಂದೇ ದಿನ 1975 ಮಂದಿಗೆ ಕೊರೋನಾ ಪಾಸಿಟಿವ್, 60 ಜನ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1975 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 22,944 ಕ್ಕೆ ಏರಿಕೆಯಾಗಿದೆ.

ಇಂದು 463 ಜನ ಬಿಡುಗಡೆಯಾಗಿದ್ದು ಇದುವರೆಗೆ 5455 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 17,051 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ ಬರೋಬ್ಬರಿ 60 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಬೆಂಗಳೂರಿನಲ್ಲಿ 437 ಜನ ಮೃತಪಟ್ಟಿದ್ದಾರೆ.

error: