ಬಾಗಲಕೋಟೆ ; ಭಾರತೀಯ ಜನತಾ ಪಕ್ಷದ ವತಿಯಿಂದ ಶಾಸಕರಾದ ಶ್ರೀ ದೊಡ್ಡನಗೌಡ್ರು ಜಿ ಪಾಟೀಲರ ನೇತೃತ್ವದಲ್ಲಿ,ಇಲಕಲ್ಲ ನಗರ ಹಾಗು ಗ್ರಾಮಿಣ ಮಂಡಲದ ವತಿಯಿಂದ ಭಾರತೀಯ ಜನತಾ ಪಕ್ಷದ ,ಸ್ಥಾಪನಾ ದಿವಸ್ ವನ್ನು ಸಂಬ್ರಮ ದಿಂದ ಆಚರಿಸಲಾಯಿತು,
ಕಾರ್ಯಕ್ರಮದಲ್ಲಿ, ಭಾರತಮಾತೆಗೆ ಪೂಜೆ ಸಲ್ಲಿಸಿ , ಶ್ರೀ ಪಂಡಿತ್ ದೀನದಯಾಳ ಉಪಾಧ್ಯಾಯರ,ಶ್ರೀ ಶ್ಯಾಮಾ ಪ್ರಸಾದ ಮುಖರ್ಜಿ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಪಕ್ಷ ನಡೆದು ಬಂದ ದಾರಿ, ಭಾರತೀಯ ಜನತಾ ಪಕ್ಷ ಕಟ್ಟಲು ಶ್ರಮಿಸಿದ ನಮ್ಮ ನಾಯಕರುಗಳ ಇತಿಹಾಸವನ್ನು ಮೇಲಕುಹಾಕಿದರು, ಕಾರ್ಯಕ್ರಮದಲ್ಲಿ ಗ್ರಾಮೀಣ ಮಂಡಲದ ಆಧ್ಯಕ್ಷರಾದ ಮಹಾಂತಗೌಡ್ರು ಪಾಟೀಲ, ನಗರ ಮಂಡಲದ ಅಧ್ಯಕ್ಷರಾದ ಅರವಿಂದ ಮಂಗಳೂರ, ಪಕ್ಷದ ಪ್ರಮುಖರಾದ ದುರಿಗೇಶಣ್ಣಾ ಸುರಪೂರ, ಪ್ರಮುಖರು, ಮಹಿಳಾ ಮೋರ್ಚಾದ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಭಾವನಾ ಟಿವಗಾಗಿ ಮಹಂತೇಶ್ ಬಾಗಲಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ