ಬಾಗಲಕೋಟೆ: ಮೂಲತಃ ದಾವಣಗೆರೆಯವರಾದ ಹಾಗೂ ಪ್ರಸ್ತುತ ಜಮಖಂಡಿಯ ಮೈಗೂರು ಕಾಲನಿ ನಿವಾಸಿಗಳಾದ ಡಾ. ಜೈಪ್ರಕಾಶ ಹಾಗೂ ಡಾ. ಗಾಯತ್ರಿ ಇವರ ಪುತ್ರನಾದ ಮೌರ್ಯವರ್ಧನ ಜೆ. ಇವನು ತನ್ನ 1 ವರ್ಷ 9 ತಿಂಗಳ ವಯಸ್ಸಿನಲ್ಲಿ “ಇಂಡಿಯಾ ಬುಕ್ ಆಫ್‌ರೆಕಾರ್ಡ್ಸ್” ನಲ್ಲಿ ಸ್ಥಾನ ಪಡೆದು ಕೊಂಡಿದ್ದಾನೆ. ಚಾರ್ಟ್ಗಳಲ್ಲಿ ಚಿತ್ರಗಳನ್ನು ಹಾಗೂ ಮನೆಯ ಎಲ್ಲಾ ವಸ್ತುಗಳನ್ನು ನೇರವಾಗಿ ಗುರುತಿಸುವ ಕಲೆಯಲ್ಲಿ ಚತುರನಾದ ಇವನು 81 ದಿನ ನಿತ್ಯದ ಕ್ರಿಯೆಗಳಿಗೆ ಸಂಬಂಧಿಸಿದ ಚಿತ್ರಗಳು, 49 ನಾವು ದೇಹಕ್ಕೆ ಬಳಸುವ ವಸ್ತುಗಳು, 35 ವಿವಿಧ ತರದ ಉಡುಪುಗಳು, 31 ವಾಹನಗಳು, 31 ವಿದ್ಯುತ್ ಚಾಲಿತ ಗೃಹಬಳಕೆ ಯಯಂತ್ರಗಳು, 30 ಗ್ಯಾಜೆಟ್‌ಗಳು, 29 ಭಾರತದ ಶ್ರೇಷ್ಠ ವ್ಯಕ್ತಿಗಳು, 31 ಅಡುಗೆ ಮನೆಯ ಸಲಕರಣೆಗಳು, 19 ಪ್ರಾಣಿಗಳು, 15 ಪಕ್ಷಿಗಳು, 10 ಹಣ್ಣುಗಳು, 10 ತರಕಾರಿಗಳು, 20 ಸಮುದಾಯದ ವೃತ್ತಿಪರರು, 10 ಸಾರ್ವಜನಿಕ ಸೇವಾಸಂಸ್ಥೆಗಳು, 16 ಪೀಠೋಪಕರಣಗಳು, 12 ಇಮೋಜಿಗಳು, 08 ಆಕಾರಗಳು, 16 ಪ್ರಾಣಿ ಪಕ್ಷಿಗಳ ಅನುಕರಣೆಗಳು, 28 ದೇಹದ ವಿವಿಧ ಅಂಗಗಳು, 113 ಗೃಹೋಪಯೋಗಿ ಹಾಗೂ ಇತರೆ ಅಗತ್ಯ ವಸ್ತುಗಳು ಹೀಗೆ 20 ವಿವಿಧ ವಿಭಾಗದಲ್ಲಿ ಒಟ್ಟು 594 ಚಿತ್ರಗಳನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡಿದ್ದಾನೆ. ಇವನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಪ್ರಶಸ್ತಿ ಪತ್ರ, ಪದಕ, ರೆಕಾರ್ಡ್ಬುಕ್ ಹಾಗೂ ಇತರೆ ವಸ್ತುಗಳನ್ನು ನೀಡಿ ಗೌರವಿಸಿದ್ದಾರೆ..
ಇವನು“ಇಂಡಿಯಾಬುಕ್ ಆಫ್ ರೆಕಾರ್ಡ್ಸ್” ನ ‘Kids Appreciation’ವಿಭಾಗದಲ್ಲಿ ಸೇರ್ಪಡೆಗೊಂಡಿದ್ದಾನೆ
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಆಲೂರು ಗ್ರಾಮದ ಡಾ. ಗಾಯತ್ರಿ ಹಾಗೂ ಡಾ. ಜೈಪ್ರಕಾಶರವರ ಪುತ್ರ.
ಅವನ ಕಲಿಕೆಗೆ ಒತ್ತಾಸೆಯಾಗಿದ್ದು ಅವನ ಅಕ್ಕ ಅಮೋಘವರ್ಷಿಣಿ (೧೧ ವ ೪ ತಿಂ)
“Extrordinary feats of Extrordinary people” ಎಂಬಧ್ಯೇಯವಾಕ್ಯವನ್ನುಇಟ್ಟುಕೊಂಡಇಂಡಿಯಾಬುಕ್ ಆಫ್ ರೆಕಾರ್ಡ್ಸ್ ವಯಸ್ಸಿಗೆ ಮೀರಿದ ಅಪ್ರತಿಮ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದ ವೇದಿಕೆ. ಇದು ಪ್ರತೀ ವರ್ಷವೂ ಪ್ರಕಟಗೊಳ್ಳುವ ಭಾರತದ ಏಕೈಕ ದಾಖಲೆಗಳ ಪುಸ್ತಕ.
ತನ್ನ ಅಗಾಧವಾದ ಜ್ಞಾನ ಶಕ್ತಿಯಿಂದ ೧ ವರ್ಷ ೯ ತಿಂಗಳ ಅತ್ಯಂತ ಕಿರಿಯ ವಯಸ್ಸಿನಲ್ಲೇ ಮೌರ್ಯವರ್ಧನ ಈ ಮೂಲಕವಾಗಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾನೆ. ಪ್ರಪಂಚವನ್ನು ಅರಿಯದ ಈ ಪುಟ್ಟಕಂದ ತನ್ನ ಸಾಧನೆಯಿಂದಾಗಿ ಲಕ್ಷಾಂತರ ಜನರಿಗೆ ಪರಿಚಿತನಾಗಿದ್ದಾನೆ. ಹಾಗೂ ಇವನ ಸಾಧನೆ ಇತರರಿಗೆ ಮಾದರಿಯಾಗಿದೆ. ತನ್ನಅದ್ಭುತ ಸಾಧನೆಯಿಂದಾಗಿ ಇವನು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತಿನಂತೆ ಅತ್ಯಂತ ಎಳೆವಯಸ್ಸಿನಲ್ಲೇ ರಾಷ್ಟ್ರಮಟ್ಟದ ಸಾಧನೆಮಾಡಿದ ಪುಟ್ಟಕಂದ ಮೌರ್ಯವರ್ಧನ ಬೆಳೆದುದೊಡ್ಡವನಾಗಿ ದಾಖಲೆಗಳ ಸರದಾರನಾಗಲಿ, ದೇಶದ ಮಹಾನ್ ವ್ಯಕ್ತಿಯಾಗಿ ಬೆಳೆಯಲಿ, ಅವನ ಮುಂದಿನ ಬಾಳು ಉಜ್ವಲವಾಗಲಿ ಎಂದು ಹಾರೈಸೋಣ…
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ