ಇಳಕಲ್ ; ಹಾಮಾರಿ ಕೊರೋನಾ ದ ಹಾವಳಿಯಿಂದ ಲಾಕ್ ಡೌನ್ ಪರಿಣಾಮದಿಂದ ಅನೇಕ ಜನರು ತೊಂದರೆ ಗೊಳಗಾಗಿದ್ದಾರೆ.ಅದರಲ್ಲಿ ಜನರನ್ನು ನಗಿಸುತ್ತಾ ಸಮಾಜಕ್ಕೆ ಒಳ್ಳೆ ಸಂದೇಶವನ್ನು ಕೊಡುತ್ತಿರುವ ನಾಟಕ ಕಲಾವಿದರ ಜೀವವು ಕೂಡ ಸಂಕಷ್ಟಕ್ಕೊಳಗಾಗಿದ್ದಾರೆ.
ದಿನನಿತ್ಯ ನಾಟಕಗಳನ್ನು ಆಡುವ ಮೂಲಕ ಜೀವನ ನಡೆಸುತ್ತಿದ್ದ ಇಳಕಲ್ ಶ್ರೀ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರಗಿ ಇಳಕಲ್ ಇವರ ಕಂಪೆನಿಯಲ್ಲಿ ಇರುವ ಕಲಾವಿದರ ಸಂಕಷ್ಟ ಪರಿಸ್ಥಿತಿಯನ್ನು ಕಂಡ ಇಳಕಲ್ ನಗರದ ಬಿ ಜೆ ಪಿ ಯುವ ಮುಖಂಡರಾದ ವಿಠಲ ಜಕ್ಕಾ ಅವರು ಒoದು ತಿಂಗಳಿಗಾಗುವಷ್ಟು ದಿನಸಿ ವಿತರಣೆ ಮಾಡಿ ಮಾನವೀತೆ ಮೆರೆದಿದ್ದಾರೆ .
ಈ ಮಹಾಮಾರಿ ಕೊರೋನಾವನ್ನು ನಮ್ಮ ದೇಶವನ್ನು ಬಿಟ್ಟು ಓಡಿಸಲು ನಾವೆಲ್ಲರೂ ಬದ್ಧರಾಗೋಣ .ಮಾಸ್ ಕಡ್ಡಾಯವಾಗಿ ಧರಿಸಬೇಕು ಸ್ಯಾನಿಟೈಸರ್ ಉಪಯೋಗಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಬಿಜೆಪಿ ಯುವ ಮುಖಂಡ ವಿಠಲ ಜಕ್ಕಾ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು .
ಜನಜಾಗೃತಿ ವೇದಿಕೆ, ಬಿಜೆಪಿಯ ಮುಖಂಡರಾದ ಯಲ್ಲಪ್ಪಪೂಜಾರಿ. ಮುತ್ತಪ್ಪ ಕದರಿ.ರಮೇಶ ಮಡಿವಾಳರ.ಮಾಹಾಂತೇಶ ವಜಲ.ಆನಂದ ವಗ್ಗಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ವರದಿ: ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ