December 21, 2024

Bhavana Tv

Its Your Channel

ನಗರಸಭೆಯಿಂದ ಮುಂಜಾಗೃತ ಕ್ರಮವಾಗಿ ಏಕಾಏಕಿಯಾಗಿ ಸೀಲಡೌನ್, ವಾರ್ಡಿನ ಜನರ ಜನಜೀವನ ಅಸ್ತವ್ಯಸ್ತ, ಉತ್ಸಾಹಿ ಯುವಕರಿಂದ ಸಾರ್ವಜನಿಕರಿಗೆ ಸಹಕಾರ

ಇಳಕಲ್ : ನಗರದ ವಾರ್ಡ್ ನಂಬರ್ ನಾಲ್ಕರಲ್ಲಿ ಕೊರನ ಪ್ರಕರಣಗಳು ಹೆಚ್ಚಾದ ಕಾರಣ ವಾರ್ಡಿನ ಕೆಲವು ಬಾಗವನ್ನು ನಗರಸಭೆಯವರು ಮುಂಜಾಗೃತ ಕ್ರಮವಾಗಿ ಏಕಾಏಕಿಯಾಗಿ ಸೀಲಡೌನ್ ಮಾಡಿದರು .

ಅಲ್ಲಿಯ ಜನರ ಜನ ಜೀವನಕ್ಕೆ ಮುಖ್ಯವಾಗಿ ಬೇಕಾಗುವ ನೀರು, ಕಿರಾಣಿ,ಕಾಯಿಪಲೇ ಮತ್ತು ಔಷಧಿ ಸೌಕರ್ಯಗಳ ಬಗ್ಗೆ ವಿಚಾರಿಸದೆ ಸೀಲಡೌನ್ ಮಾಡಿದ್ದು ವಾರ್ಡಿನ ಜನರ ಜನಜೀವನ ಅಸ್ತವ್ಯಸ್ತವಾಗಿದೆ.

ಈ ವ್ಯವಸ್ಥೆಯನ್ನು ನೋಡಿ ಅದೇ ವಾರ್ಡಿನ ಉತ್ಸಾಹಿ ಯುವಕರಾದ ಸುರೇಶ ಯಾಳಗಿ, ರವಿ ಯಾಳಗಿ,ಚೌಡೇಶ್ ಕವಿತಾ, ನಾರಾಯಣ ಕವಿತಾ ,ರವಿ ಕೋಚಿ ಮತ್ತು ಕೊಟ್ರೇಶ್ ಚಿಲ್ಲಾಳ ಇವರೆಲ್ಲರೂ ಸೇರಿ ಆ ವಾರ್ಡಿನ ಎಲ್ಲರಿಗೂ ತಮ್ಮ ಸ್ವಂತ ಖರ್ಚಿನಿಂದ ಹಾಲು ಸಕ್ಕರೆ ಚಾಪುಡಿ ಕೊಟ್ಟು ಅದರ ಜತೆ ಪಲಾವ್ ಅನ್ನ ರೆಡಿಮಾಡಿ ಅಲ್ಲಿಯ ಜನರಿಗೆ ನೀಡಿ ಇಂತಹ ಸಮಯದಲ್ಲಿ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ .
ಕೊರೋನಾ (ಕೋವಿಡ್ ೧೯ ) ಎಂಬ ಶಬ್ದ ಕೇಳಿದೊಡನೆ ಅಸ್ಪೃಶ್ಯತೆಯಿಂದ ನೋಡುವ ಜನರ ಮಧ್ಯೆ ಯುವಕರ ಮಾನವೀಯತೆ ಮತ್ತು ಧೈರ್ಯವನ್ನು ಮೆಚ್ಚಬೇಕು.
ಜನಪ್ರತಿನಿಧಿಗಳು, ತಾಲ್ಲೂಕು ದಂಡಾಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಅಲ್ಲಿನ ಯುವಕರು ಮಾಡಿದ್ದಾರೆ.
ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಅಲ್ಲಿನ ಜನರು ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ನಮ್ಮ ಭಾವನಾ ಮಾಧ್ಯಮದ ಮೂಲಕ ತಿಳಿಸಿದ್ದಾರೆ..

ವರದಿ: ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್.

error: