December 21, 2024

Bhavana Tv

Its Your Channel

ಮಹಾಮಾರಿ ಕರೋನಾ( ಕೋವಿಡ್ ೧೯) ವಿರುದ್ದ ಹೋರಾಟಕ್ಕೆ ಕೈ ಜೋಡಿಸಿದ ಸರ್ವವಿಜಯ ಸೇವಾ ಸಂಸ್ಥೆ

ಇಳಕಲ್ ; ಈಗಾಗಲೇ ನಗರದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತ ಜನರಿಗೆ ಸ್ವಚ್ಚತೆಯ ಜಾಗೃತಿ ಮೂಡಿಸುತ್ತ, ಇಳಕಲ್ ನಗರದ ಮನೆ ಮಾತಾಗಿರುವ ,ಬಡ ಜನರ ಹಸಿವು ನೀಗಿಸುತ್ತಿರುವ , ಜಾತಿ ಭೇದ ಭಾವ ಇಲ್ಲದೆ ಎಲ್ಲರನ್ನೂ ಸಮಾನತೆಯಿಂದ ನೋಡಿಕೊಳ್ಳುತ್ತಿರುವ ಸರ್ವವಿಜಯ ಸೇವಾ ಸಂಸ್ಥೆ ಈಗ ಕೊರೋನಾ ಸಾಂಕ್ರಾಮಿಕ ರೋಗದಿಂದತುತ್ತಾದ ಜನಗಳಿಗೆ ಆಮ್ಲಜನಕ ವಿಲ್ಲದೆ ಸಾವುಗಳು ಸಂಭವಿಸುತ್ತಿರುವುದರಿAದ ಇದನ್ನು ಕಂಡು ಜನಗಳಿಗೆ ಆಮ್ಲಜನಕ ಪೂರೈಕೆ ಮಾಡಲು ಮುಂದಾಗಿದ್ದು ಇಂದು ಸಂಸ್ಥೆಯ ಗೌರವಾಧ್ಯಕ್ಷರಾದ ರಾಜು ಎಮ್ ಬೋರಾ ಅವರು ಬಾಗಲಕೋಟ ಜಿಲ್ಲೆಯ ಕುಮಾರೇಶ್ವರ ಆಸ್ಪತ್ರೆಗೆ ಒಂದು ಕಂಟೇನರ್ (20KL oxygen) ಆಕ್ಸಿಜನ್ ವಿತರಣೆ ಮಾಡುವ ಮೂಲಕ ಮಹಾಮಾರಿ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ .


ಈ ಸಂದರ್ಭದಲ್ಲಿ ಬಾಗಲಕೋಟೆಯ ಶಾಸಕರಾದ ವೀರಣ್ಣ ಚಿರಂತಿಮಠ,ಅಶೋಕ ಸಜ್ಜನ,ಡಾ ನವೀನ ಚಿರಂತಿಮಠ,ಡಾ?ಅಶೋಕ ಮಲ್ಲಾಪುರ, ಡಾ|| ಭುವನೇಶ್ವರಿ ಎಳಮಲಿ,ರವಿ ಸಂಗಪ್ಪ, ದೇಸಾಯಿ ರಕ್ಕಸಗಿ ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಸರ್ವವಿಜಯ ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ರಾಜು ಬೋರಾ ಅವರು ಜನರು ಸಾಮಾಜಿಕ ಅಂತರ, ಮಾಸ್ಕ್, ಹಾಗೂ ಸ್ಯಾನಿಟೈಜರ್ ಕಡ್ಡಾಯವಾಗಿ ಉಪಯೋಗಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ವರದಿ : ವಿನೋದ ಬಾರಿಗಿಡದ. ಇಳಕಲ್

error: