December 20, 2024

Bhavana Tv

Its Your Channel

ಕರೋನ ಮಹಾಮಾರಿ ಓಡಿಸಲು ಬಾದಾಮಿ ಯುವ ಮಿತ್ರರಿಂದ ಶಿರಡಿ ಸಾಯಿಬಾಬಾ ಜಪದೊಂದಿಗೆ ಕರೋನ್ ಓಡಿಸುವಂತೆ ಸಂಕಲ್ಪ,

ಬಾದಾಮಿ ; ಕರೋನ ಮಹಾಮಾರಿ ಓಡಿಸಲು ಬಾದಾಮಿ ಯುವ ಮಿತ್ರರಿಂದ ಶಿರಡಿ ಸಾಯಿಬಾಬಾ ಅವರ ದೇವಸ್ಥಾನ ಕಾಟಾ ಪೂರದ ಸಹಯೋಗದಲ್ಲಿ ಗೋಧಿಹಿಟ್ಟು ಬಾಬಾನ ಅಂಗಾರದ ಜೊತೆ ನಗರದ ಮುಖ್ಯ ಪ್ರವೇಶ ದ್ವಾರದಲ್ಲಿ ಬಾಬಾನ ಜಪ ದೊಂದಿಗೆ ಕರೋನ್ ಓಡಿಸುವಂತೆ ಸಂಕಲ್ಪ ಮಾಡುತ್ತಾ ಹಾಕಲಾಯಿತು.

ಶ್ರೀ ಸಾಯಿ ಬಾಬಾರ ಗೋಧಿಹಿಟ್ಟಿನ ಚರಿತ್ರೆ ತುಂಬಾ ಪುರಾತನವಾದದ್ದು, ನೂರು ವರ್ಷದ ಹಿಂದೆ ಆಗ
ಕಾಲರಾ ಭಯಂಕರ ರೋಗ, ಕಾಲರಾ ರೋಗ ಬಂದಾಗ ಆ ದಿನಗಳಲ್ಲಿ ಶ್ರೀ ಸಾಯಿಬಾಬಾ ಅವರು ಮನೆಮನೆಗೆ ಹೋಗಿ ಗೋಧಿ ತೆಗೆದುಕೊಂಡು ತಾವೇ ಗೋಧಿ ಹಿಟ್ಟನ್ನು ಬೀಸಿ ಶ್ರೀ ಶಿರಡಿ ಕ್ಷೇತ್ರದಲ್ಲಿ ಗೋದಿಹಿಟ್ಟನ್ನು ಹಾಕಿದರು, ಬಾಬಾರವರು ಹಿಟ್ಟನ್ನು ಹಾಕಿದ ಸರಹದ್ದಿನ ಜನರೆಲ್ಲರೂ ಬದುಕಿ ಉಳಿದ ಅಚ್ಚರಿ ಘಟನೆ ನಡೆದುಹೋಗಿದೆ. ಹಾಗೆ ಅಂದು ಸಾಯಿ ಬಾಬಾ ಕಾಲರಾವನ್ನು ತಡೆಗಟ್ಟಿ ಮನುಕುಲವನ್ನು ಕಾಪಾಡಿದರು. ಹಾಗೆಯೇ ಈಗ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಯುವಮಿತ್ರು ಸೇರಿಕೊಂಡು ತಾಲೂಕಿನ ಕಾಟಾಪೂರ ಸಾಯಿಬಾಬಾ ದೇವಸ್ಥಾನದ ಸಹಯೋಗದೊಂದಿಗೆ ಶಿರಡಿ ಸಾಯಿಬಾಬಾ ಮಂದಿರ ಕಾಟಾಪುರ್ ಇವರ ಸಹಯೋಗದಲ್ಲಿ ದ್ವಾರಕಾಮಯಿ ಗೋಧಿಯನ್ನು
ಹಿಟ್ಟು ಮಾಡಿ ಹಾಗೆ ಬಾಬಾರ ವಿಭೂತಿ ಗೋಧಿ ಹಿಟ್ಟನ್ನು ಬಾದಾಮಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಅದೇ ತರನಾಗಿ ಗೋದಿಹಿಟ್ಟನ್ನು ವಿಭೂತಿಯನ್ನು ಹಾಕಲಾಗಿದೆ, ಗೋಧಿಹಿಟ್ಟು ಹಾಗೂ ಸಾಯಿಬಾಬಾ ಅವರ ಆಧಾರವಾದ ಅಂಗಾರವನ್ನು ತೆಗೆದುಕೊಂಡು ಬಂದು ನಗರದ ಮುಖ್ಯ ಮಹಾದ್ವಾರಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಹಾಗೂ ಗಲ್ಲಿಗಳಲ್ಲಿ ಸಾಯಿಬಾಬಾನ ಹೆಸರು ಹೇಳಿ ಈ ಉಲ್ಬಣಗೊಳ್ಳುತ್ತಿರುವ ಕರೋನ ಮಹಾಮಾರಿಯನ್ನು ಹೋಗಲಾಡಿಸಿ ನಮ್ಮ ಭಾಗವನ್ನು ನಮ್ಮ ಜನರನ್ನು ರಕ್ಷಿಸು ಬಾಬಾ ಎಂದು ಪ್ರಾರ್ಥಿಸಿ ನೆನೆದು ಸಂಕಲ್ಪ ಮಾಡುತ್ತಾ ದೇವಸ್ಥಾನದಿಂದ ತಂದಿರುವ ದ್ವಾರಕಾಮಯಿ ಗೋಧಿಹಿಟ್ಟು ಸಾಯಿಬಾಬಾರ ಆಧಾರವಾದ ವಿಭಾತಿಯನ್ನು ಹಾಕಲಾಯಿತು. ತಾಲೂಕಿನ ಗ್ರಾಮಗಳಿಗೆ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಲ್ಲರೂ ಒಗ್ಗೂಡಿ ಈ ಕರೋನ ಮಾಹಾಮಾರಿಯನ್ನು ಓಡಿಸೋಣ ಎಂದು ಬಾದಾಮಿ ಯುವಮಿತ್ರರು ಕೋರಿದ್ದಾರೆ.

ವರದಿ:- ರಾಜೇಶ್. ಎಸ್.ದೇಸಾಯಿ ಬಾದಾಮಿ ಬಾಗಲಕೋಟೆ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: