ಇಳಕಲ್: ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಇಳಕಲ್ನ ಶ್ರೀ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿಗಳಾದ ಗುರುಮಹಾಂತ ಶ್ರೀಗಳ ಅಮೃತ ಹಸ್ತದಿಂದ ಸಾಂಕೇತಿಕವಾಗಿ ೫ ಜನಗಳಿಗೆ ನೀಡಿದರು.
ಮಹಾಮಾರಿ ಕೊರೋನಾ ಸಾಂಕ್ರಮಿಕ ರೋಗದ ಎರಡನೆ ಅಲೆಯ ಹಿನ್ನಲೆ ಇಳಕಲ್ ತಾಲೂಕಿನ ಅನೇಕ ಬಡ ಜನರು,ಕಲಾವಿದರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದರಿಂದ ಬೆಂಗಳೂರಿನ ಅಜೀಜ ಪ್ರೇಮಜಿ ಫೌಂಡೇಶನ್ ವತಿಯಿಂದ ಇಳಕಲ್ ತಾಲೂಕಿನ ಒಂದು ಸಾವಿರ ಬಡ ಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ ಎಂದು ಇಳಕಲ್ ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ತಿಳಿಸಿದರು.
ಇಳಕಲ್ ನಗರದ ವಿಜಯ ಮಹಾಂತೇಶ್ವರ ಅನುಭವ ಮಂಟಪದ ಆವರಣದಲ್ಲಿ ಅಜೀಜ ಪ್ರೇಮಜಿ ಫೌಂಡೇಶನ್ ಇವರು ಬಡ ಜನರಿಗೆ , ರಂಗ ಕಲಾವಿದರು, ದೇವದಾಸಿಯರು, ಬಡ ನೇಕಾರರು, ನಿರ್ಗತಿಕರು, ಕೂಲಿಕಾರ್ಮಿಕರು, ಬಿಕ್ಷುಕರು ಹಾಗು ಬಡ ಮಹಿಳೆಯರಿಗೆ ಆಹಾರದ ಕಿಟ್ಗಳನ್ನು ವಿತರಣೆ ಮಾಡಿದರು.
ಅಜೀಜ ಪ್ರೇಮಜಿ ಪೌಂಡೇಶನ್ದ ಅಧಿಕಾರಿಗಳಾದ ಶಿವಕುಮಾರ, ಚಿಕ್ಕವಿರೇಶ, ವಿಜಯಕುಮಾರ, ದೊಡ್ಡಈರಣ್ಣ ಇವರನ್ನು ಇಳಕಲ್ ನಗರದ ಬಡ ಜನರ ಮತ್ತು ರಂಗ ಕಲಾವಿದರ ಪರವಾಗಿ ಇಳಕಲ್ಲಿನ ಸ್ನೇಹರಂಗವು ಗೌರವಿಸಿ ಸತ್ಕರಿಸಿದರು.
ಅಲ್ಲದೆ ಇಳಕಲ್ ತಾಲೂಕಿನ ಕಂದಗಲ್ಲ, ಗೋರಬಾಳ, ಹಿರೇಕೊಡಗಲಿ, ಚಿಕ್ಕಕೊಡಗಲಿ ಮುಂತಾದ ಗ್ರಾಮಗಳಲ್ಲಿಯ ಬಡ ಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಇಳಕಲ್ ಸ್ನೇಹರಂಗದ ಕಾರ್ಯದರ್ಶಿ ಬಸವರಾಜ ಕೋಟಿ, ಮಹಾದೇವ ಕಂಬಾಗಿ, ಚಂದ್ರಶೇಖರ ಶ್ಯಾಸ್ತಿç, ರಮೇಶ ಚಿತ್ರಗಾರ, ಪಿ.ಡಗಳಚಂದ, ಮಹಾಂತೇಶ ಗಜೇಂದ್ರಗಡ, ನಾಟ್ಯರಾಣಿ ನಾಟಕ ಸಂಘದ ಅದ್ಯಕ್ಷೆ ಉಮಾರಾಣಿ ಬಾರಿಗಿಡದ, ರಂಗ ಕಲಾವಿದರ ಸಂಘದ ಅದ್ಯಕ್ಷ ಬಲವಂತ ಪಾಟೀಲ ರಮೇಶ ಮಡಿವಾಳರ ಇತರರು ಉಪಸ್ತಿತರಿದ್ದರು.
ವರದಿ ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ