ಇಳಕಲ್; ನಗರದ ದುರಸ್ಥಿ ಸ್ಥಿತಿಯಲ್ಲಿರುವ ಹಳೆಯ ಗ್ರಂಥಾಲಯ ಕಟ್ಟಡಕ್ಕೆ ಶಾಸಕರಾದ ದೊಡ್ಡನಗೌಡ
ಪಾಟೀಲ ಹಾಗೂ ನಗರಸಭೆ ಅಧ್ಯಕ್ಷೆ ರಾದ ಶೋಭಾ ಆಮದಿಹಾಳ ಭೇಟಿ ನೀಡಿ ವಿಕ್ಷೀಸಿದರು,ಈಗಾಗಲೆ ನಗರಸಭೆ ವತಿಯಿಂದ ಹೊಸ ಕಟ್ಟಡಕ್ಕಾಗಿ ಜಾಗೆಯನ್ನು ಸಂಬoಧಿಸಿದ ಇಲಾಖೆಗೆ ಹಸ್ತಾಂತರ ಮಾಡಲಾಗಿದ್ದು ಹಲವಾರು ಸೌಕರ್ಯವುಳ್ಳ ಹೊಸ ಕಟ್ಟಡದ ನೀಲನಕ್ಷೆಯನ್ನು ಶಾಸಕರು ಪರಿಶೀಲನೆ ನಡೆಸಿದರು, ಸಂಬoಧಿಸಿದ ಇಲಾಖೆಯ ವತಿಯಿಂದ ಶೀಘ್ರದಲ್ಲಿ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆಯನ್ನು ನೀಡಿದರು, ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ಆರಿ , ಬಿಜೆಪಿ ನಗರ ಮಂಡಳ ಅಧ್ಯಕ್ಷರಾದ ಅರವಿಂದ ಮಂಗಳೂರ, ನಗರಸಭೆ ಹಿರಿಯ ಸದಸ್ಯರಾದ ಲಕ್ಷ್ಮಣ ಗುರಂ, ನಗರಸಭೆ ಸದಸ್ಯರಾದ ಚಂದ್ರಶೇಖರ ಏಕಬೋಟೆ, ಹನುಮಂತ ತುಂಬದ, ಲಕ್ಮೀಬಾಯಿ ಹಾದಿಮನಿ, ಟಿ ಎಚ್ ಕುಲಕರ್ಣಿ ಮತ್ತು ಕಸಪ ಮಾಜಿ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ ಉಪಸ್ಥಿತರಿದ್ದರು.
ವರದಿ : ವಿನೋದ ಬಾರಿಗಿಡದ. ಇಳಕಲ್ಲ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ