December 22, 2024

Bhavana Tv

Its Your Channel

ಇಳಕಲ್ ನಗರಾಭಿವೃದ್ಧಿ ಸಮಿತಿ ವತಿಯಿಂದ ನಗರಸಭೆ ನೂತನ ಪೌರಾಯುಕ್ತರಿಗೆ ಸನ್ಮಾನ.

ಇಳಕಲ್ ನಗರಸಭೆ ನೂತನ ಪೌರಾಯುಕ್ತರಾದ ರಾಮಕೃಷ್ಣ ಎಫ್ .ಸಿದ್ದನಕೊಳ್ಳ ಅವರಿಗೆ ಇಳಕಲ್ ನಗರಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನ ಮಾಡಿ ಮಾತನಾಡಿದ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರ ಪಟ್ಟಣ್ಣ ರವರು ಈಗಾಗಲೇ ತಾವು ಹಲವು ಕಡೆ ಕಾರ್ಯ ನಿರ್ವಹಿಸಿ ಬಂದಿದ್ದಿರಿ. ತಮ್ಮ ಕಾರ್ಯ ಕ್ಕೆ ಎಲ್ಲೇಡೆಯೂ ಮೆಚ್ಚುಗೆ ನೀಡಿದ್ದಾರೆ ಮಾದರಿ ಇಳಕಲ್ ನಗರಸಭೆ ಮಾದರಿ ನಗರಸಭೆ ಆಗುವ ನಿಟ್ಟಿನಲ್ಲಿ ತಾವು ತಮ್ಮ ಸಿಬ್ಬಂದಿ ಕಾರ್ಯ ನಿರ್ವಹಿಸಲಿ ಎಂಬ ಬಯಕೆ ನಮ್ಮದು ನಿಮ್ಮ ಅಧಿಕಾರದ ಅವಧಿಯಲ್ಲಿ ನಗರಕ್ಕೆ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಲಿ ಎಂದು ಹೇಳಿದರು

ಇದೇ ಸಂಧರ್ಭದಲ್ಲಿ ರಾಮಕೃಷ್ಣ ಎಫ್ .ಸಿದ್ದನಕೊಳ್ಳ ಮಾತನಾಡಿ ನಗರದ ಅಭಿವೃದ್ಧಿ ನನ್ನ ಅಭಿವೃದ್ಧಿ ಎಂದು ತಿಳಿದು ನಿಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತೆನೆ ಎಂದು ನಗರಾಭಿವೃದ್ಧಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ತಿಳಿಸಿದರು.ಸಮಾರಂಭದಲ್ಲಿ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಾಪಟ್ಟಣ್ಣ. ಸಮಿತಿ ಸದಸ್ಯರಾದ ಎಲ್ .ಬಿ ಅರಸಿದ್ದಿ.ಎಸ್ .ಸಿ ಅಕ್ಕಿ. ಮಹಮ್ಮದ್ ಬಾಗವಾನ ಕಂಡಕ್ಟರ್, ಟಿ.ಎಚ್ ಕುಲಕರ್ಣಿ.ಹಿರಿಯ ವರದಿಗಾರ ಬಿ ಬಾಬು.ಮತ್ತು ನಗರದ ಹಿರಿಯರು ಈ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ವರದಿಗಾರ : ವಿನೋದ ಬಾರಿಗಿಡದ

error: