December 19, 2024

Bhavana Tv

Its Your Channel

ಶ್ರೀ ವಿಜಯ ಮಹಾಂತೇಶ ಬಿಬಿಎ ಹಾಗೂ ಬಿಸಿಎ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಲಸಿಕಾರಣ ಅಭಿಯಾನ.

ಇಳಕಲ್ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಬಿಬಿಎ,ಬಿಸಿಎ, ಹಾಗೂ ಎಂಬಿಎ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೋವಿಡ್-೧೯ ವಿಶೇಷ ಲಸಿಕಾಕರಣ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷರಾದ ಸಿ.ಪಿ.ಸಾಲಿಮಠ ಅವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಚೇರಮನ್ನರಾದ ಎಂ.ಬಿ.ಹರವಿ, ನಿರ್ದೇಶಕರಾದ ಡಾ. ಸುಧೀಂದ್ರ ರಾವ್ ಎಲ್.ಎನ್,ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಪ್ರಾಚಾರ್ಯರಾದ ಶ್ರೀಕಾಂತ ಮಾರಾ, ಉಪನ್ಯಾಸಕರಾದ ಅಜಿತ್ ಬಿಜ್ಜಲ,ಗಣೇಶ ಶಿಂಗನಗುತ್ತಿ,ಸAತೋಷ ಉಪ್ಲಾಂಕರ್,ಬಸವರಾಜ ಕಾಳಗಿ,ಗೀತಾ ಬಿಜ್ಜಲ,ಅಮರೇಗೌಡ ಪಾಟೀಲ,ಗುರುರಾಜ ಸೊಡ್ಡಿ,ಬೋಧಕೇತರ ಸಿಬ್ಬಂದಿಗಳಾದ ಎಸ್.ಸಿ.ಹಿರೇಮಠ,ಶಿರಸಪ್ಪ ಪತ್ತಾರ, ವಿಜಯಕುಮಾರ ಅಗ್ನಿ,ಮಂಜುನಾಥ ಕಿಡದೂರ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ: ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್

error: