ಇಳಕಲ್: ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘ (ರಿ)ಕಂದಗಲ್ ಇವರ ವತಿಯಿಂದ ಕಂದಗಲ್ಲ ಗ್ರಾಮದ ಮುಖ್ಯ ರಸ್ತೆಯ ಮಧ್ಯದಲ್ಲಿ ಇರುವ ಡಿವೈಡರ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು
ಹತ್ತು ವಿವಿಧ ತಳಿಯ ಸಸಿಗಳನ್ನು ಡಿವೈಡರ್‌ನಲ್ಲಿ ನೆಡುವ ಈ ಕಾರ್ಯಕ್ರಮದಲ್ಲಿ ಗ್ರಾಮ ಮರಿಯಪ್ಪ ಭಜಂತ್ರಿ ಮತ್ತು ನಿಹಾರಿಕ ಗ್ರಾಮೀಣಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಡಾ. ಪಿ ವಿ ಜೋಶಿ ರವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು .
ಸಸಿಗಳನ್ನು ರಸ್ತೆ ಪಕ್ಕದಲ್ಲಿರುವ ಅಂಗಡಿ ಮಾಲೀಕರಿಗೆ ಆ ಸಸಿಯ ಬೆಳೆಸುವ ಸಂರಕ್ಷಣೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು . ಕಂದಗಲ್ಲನ ಸ್ಥಳೀಯರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಅವರೆಲ್ಲರಿಗೂ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷ ವಿನೋದ ಮೆಣಸಿನಕಾಯಿ ಧನ್ಯವಾದಗಳನ್ನು ತಿಳಿಸಿದರು.
ಸಂಘದ ಅಧ್ಯಕ್ಷರಾದ ವಿನೋದ ಮೆಣಸಿನಕಾಯಿ ,ಉಪಾಧ್ಯಕ್ಷ ವೀರೇಶ ಸಿಂಪಿ ಮತ್ತು ಕಾರ್ಯದರ್ಶಿ ಶ್ರಿ?ಕಾಂತ ಮರಟಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ಪ್ರಶಾಂತ್ ಬನ್ನಿಗೋಳ ,ರಾಜು ಪರಾಶರ್, ಮೈಬೂಬ್ ಯಂಕಣ್ಣ ಮಳಿ. ಶಿವಣ್ಣ ಕತ್ತಿ, ಸಾದಿಕ್ ದೋಟಿಹಾಳ ಪ್ರಜ್ವಲ್, ಮಂಜುನಾಥ್, ತೋಟದ ಸ್ವಾಮಿ ಮಠ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ