ಇಳಕಲ್: ನ್ಯಾಯವಾದಿ ಸಂತೋಷ ರಾಂಪೂರ ವಕೀಲರ ಮೇಲೆ ಇಳಕಲ್ ಶಹರ ಪೊಲೀಸ್ ಠಾಣೆಯ ಪಿಎಸ್ ಐ ಪಾಟೀಲ್ ಅವರು ಹಲ್ಲೆ ಮಾಡಿದ್ದು ಅವರನ್ನು ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕೆಂದು ಹುನಗುಂದ ಹಾಗೂ ಇಳಕಲ್ ತಾಲ್ಲೂಕಾ ವಕೀಲರ ಸಂಘದಿAದ ಇಳಕಲ್ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ವಕೀಲರ ಸಂಘದವರು ಇಳಕಲ್ ನಗರ ಪಿಎಸ್‌ಐ ಎಸ್ ಬಿ ಪಾಟೀಲರು ವಕೀಲರಾದ ಸಂತೋಷ ಜಿ ರಾಂಪುರ ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರನ್ನು ಎರಡು ತಾಸುಗಳ ಕಾಲ ಸ್ಟೇಶನ್ ನಲ್ಲೆ ಇರಿಸಿದ್ದಾರೆ. ಹೀಗಾಗಿ ವಕೀಲರ ಸಂಘದ ಸದಸ್ಯರಿಗೆ ಹಕ್ಕು ಚ್ಯುತಿಯಾಗಿದೆ, ತಕ್ಷಣವೇ ಇಳಕಲ್ ನಗರದ ಎಸ್ ಬಿ ಪಾಟೀಲ್ ರನ್ನು ಅಮಾನತು ಗೊಳಿಸಬೇಕು ಎಂದು ಹುನಗುಂದ ಹಾಗೂ ಇಳಕಲ್ ತಾಲ್ಲೂಕು ವಕೀಲರ ಸಂಘವು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಿದರು .
ವಕೀಲರ ಸಂಘದ ಅಧ್ಯಕ್ಷ ಎಮ್. ಬಿ .ದೇಶಪಾಂಡೆ ಅವರು ಗ್ರೇಡ ೨ ತಹಶಿಲ್ದಾರ ಎ. ರತ್ನ ಅವರಿಗೆ ಮನವಿ ಸಲ್ಲಿಸಿದರು ಸಂಘದ ಕಾರ್ಯದರ್ಶಿ ವಿ .ಎಸ್. ಗೌಡರ್ ಹಾಗೂ ಸಮಸ್ತ ಹುನಗುಂದ ಹಾಗೂ ಇಳಕಲ್ ತಾಲ್ಲೂಕಾ ವಕೀಲರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ