ಇಳಕಲ್: ಸರಕಾರಕ್ಕೆ ಗೊತ್ತಿಲ್ಲದ ತಿಳಿಯದ ಕೆಲವು ವಿಷಯಗಳನ್ನು ಪತ್ರಕರ್ತರು ಪತ್ತೆಹಚ್ಚಿ ಸಂಗ್ರಹಿಸಿ ತಮ್ಮ ತಮ್ಮ ಪತ್ರಿಕೆಗಳಲ್ಲಿ ಬರೆಯುವ ಮೂಲಕ ಬೆಳಕು ಚೆಲ್ಲುವ ಮೂಲಕ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಚಿತ್ತರಗಿ -ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಗುರುಮಹಾಂತ ಸ್ವಾಮಿಗಳು ನುಡಿದರು.
ಶನಿವಾರ ಶ್ರೀ ಮಠದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಳಕಲ್ ತಾಲೂಕ ಘಟಕ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಬಿಲ್ವ ಪತ್ರಿಗಿಡದ ಸಸಿಗಳನ್ನು ನೆಟ್ಟು ಮಾತನಾಡಿದರು.
ಎಲೆ ಮರ ಕಾಯಿಯ ಹಾಗೇ ಗೃಹ ರಕ್ಷಕ ದಳದವರು ಅಜ್ಞಾತ ವ್ಯಕ್ತಿಗಳಾಗಿ ಕೊರೋನಾ ಸಂದರ್ಭದಲ್ಲಿ ಸಲ್ಲಿಸಿದ ಸೇವೆ ನಿಜಕ್ಕೂ ಅನನ್ಯವೆಂದರು. ಇಳಕಲ್ ತಾಲ್ಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ ಗವಿಮಠ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಕೊರೋನಾ ಸಮಯದಲ್ಲಿ ಪೋಲಿಸರಿಗಿಂತಲೂ ಹೆಚ್ಚು ಓಡಾಡಿ ಕೆಲಸ ಮಾಡಿದವರು. ಗೃಹರಕ್ಷಕ ದಳದವರು ಎನ್ನುತ್ತ ಸಾಮಾಜಿಕ ಕಾರ್ಯದಲ್ಲಿ ಪತ್ರಕರ್ತರ ಸೇವೆ ಸಂಘದ ಉದ್ದೇಶವನ್ನು ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ೨೫ ಕ್ಕೂ ಮಿಕ್ಕ ಗೃಹ ರಕ್ಷಕದಳದವರನ್ನು ಗೌರವಿಸಿ ಸತ್ಕರಿಸಲಾಯಿತು. ಸತ್ಕಾರಕ್ಕೆ ಉತ್ತರವಾಗಿ ಗೃಹ ರಕ್ಷಕದಳದ ಮುಖ್ಯಸ್ಥ ಹನಮಂತ ಭಜಂತ್ರಿ ಗೃಹರಕ್ಷಕ ದಳದವರನ್ನು ಯಾರೂ ಸನ್ಮಾನಿಸಿಲ್ಲ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿAದ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು
ಪೂಜ್ಯ ಗುರು ಮಹಾಂತಶ್ರೀಗಳು ನಿಪಾಣಿಯ ಬಸವ ಮಲ್ಲಿಕಾರ್ಜುನ ಶೀಗಳು ಮತ್ತು ಯಾದವಾಡದ ಶಿವಯೋಗಿಶ್ರೀಗಳನ್ನು ಕಾ.ನಿ.ಪ. ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಮಲ್ಲಿಕಾರ್ಜುನ ಇಂದರಗಿ ಸ್ವಾಗತಿಸಿದರು ವಿನೋದ ಬಾರಿಗಿಡದ ಪರಿಚಯಿಸಿದರು ಬಸವರಾಜ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು ಸಚಿನ ಸಾಲಿಮಠ ನಿರೂಪಿಸಿದರು ಮಹಾಂತೇಶ ಗೊರಜನಾಳ ವಂದಿಸಿದರು
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ