December 22, 2024

Bhavana Tv

Its Your Channel

ಶಾಲಾ ಕಾಲೇಜುಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನ ಹಾಗೂ ಹುತಾತ್ಮ ದಿನಾಚರಣೆ ಆಚರಿಸುವಂತೆ ಮನವಿ.

ಇಳಕಲ್: ಬ್ರಿಟಿಷರ ವಿರುದ್ಧ ಹೋರಾಡಲು ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಕೆಚ್ಚೆದೆಯ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆಗಸ್ಟ್ ೧೫ ಅಂದ್ರೆ ನಮ್ಮ ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕ ದಿನ. ಹಾಗೂ ಜನೇವರಿ ೨೬ ಹುತಾತ್ಮರಾದ ದಿನ ಹೀಗಾಗಿ ಈ ೨ ದಿನಗಳಂದು ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣರ ಭಾವಚಿತ್ರಕ್ಕೆ ಪೂಜಿಸುವುದರ ಮೂಲಕ ಗೌರವಿಸಬೇಕೆ೦ದು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ತಾಲ್ಲೂಕು ಅಧ್ಯಕ್ಷರಾದ ಶಶಿಕಾಂತ್ ಗುರಿಕಾರ .ತಾಲ್ಲೂಕು ಉಪಾಧ್ಯಕ್ಷ ರಾದ ಮಲ್ಲಪ್ಪ ಹುನಗುಂದ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಿನೋದ ಬಾರಿಗಿಡದ ಇಳಕಲ್

error: