December 20, 2024

Bhavana Tv

Its Your Channel

ಗಂಗಮ್ಮಳಿಗೆ ಗಾಣಿಗ ಸಮಾಜದಿಂದ ಆರ್ಥಿಕ ಧನ ಸಹಾಯ

ಇಳಕಲ್: ಬಾಗಲಕೋಟ ಜಿಲ್ಲೆಯ ಮುಚಖಂಡಿ ಗ್ರಾಮದ ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡು ಅಪೂರ್ವ ಸಾಧನೆ ಮಾಡಿದ್ದಕ್ಕಾಗಿ ಜಿಲ್ಲಾ ಗಾಣಿಗ ಸಮಾಜ ವತಿಯಿಂದ ೨೫ ಸಾವಿರ ರೂ ಸಹಾಯ ಧನವನ್ನು ನೀಡಲಾಯಿತು.
ವಿದ್ಯಾರ್ಥಿಯ ಮುಂದಿನ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಧನ ಸಹಾಯ ನೀಡಿ ಸತ್ಕರಿಸಿ ಗೌರವಿಸಲಾಯಿತು. ಅಖಿಲ ಭಾರತ ಗಾಣಿಗ ಸಮಾಜದ ಅಧ್ಯಕ್ಷ ಗುರಣ್ಣ ಗೋಡಿ ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ, ಆರ್.ಜಿ. ಪಾಟೀಲ್ ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿ ಗಂಗಮ್ಮಳನ್ನು ಅಭಿನಂದಿಸಿ ಸನ್ಮಾನಿಸಿದರು.

ವರದಿ: ವಿನೋದ ಬಾರಿಗಿಡದ

error: