December 19, 2024

Bhavana Tv

Its Your Channel

ಬಡವರ ಬಗ್ಗೆ ಕಾಳಜಿ ಇಲ್ಲದ ರಾಜಕಾರಣಿ ವ್ಯಕ್ತಿಯೆಂದರೆ ಶಾಸಕ ದೊಡ್ಡನಗೌಡ ಜಿ ಪಾಟೀಲ :ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ.

ಇಳಕಲ್ ತಾಲೂಕಿನ ವ್ಯಾಪ್ತಿಗೆ ಬರುವ ಗುರುಲಿಂಗಪ್ಪ ಕಾಲೋನಿಯ ನಿವಾಸಿಗಳು ೨೫ ವರ್ಷಗಳಿಂದ ವಾಸವಿದ್ದು ಆ ಜನತೆಗೆ ಅಡ್ಡಾಡಲೂ ಸರಿಯಾದ ರಸ್ತೆ ಇಲ್ಲ .ಮಳೆ ಬಂದರೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೂಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ . ಸಾಕಷ್ಟು ಜನರು ಈ ರಸ್ತೆಯಲ್ಲಿ ಬಿದ್ದು ತಮ್ಮ ಕೈ ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದ ಉದಾಹರಣೆಗಳು ಇವೆ.ನಿಲ್ಲುವವರೆಗೂ ನಮಗೆ ಹಕ್ಕು ಪತ್ರ ಬಂದಿಲ್ಲ .

ಕಾಲೊನಿಯ ಬಡಜನತೆ ಎಲ್ಲರೂ ಸೇರಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರಿಗೆ ಕೇಳಲು ಹೋದರೆ ಇವತ್ತ ಬಾ ನಾಳೆ ಬಾ ಎಂದು ಕಳಿಸುವರು. ಹಕ್ಕುಪತ್ರ ವಿತರಣೆಯಲ್ಲಿ ಬಡವರ ಜತೆಗೆ ತಾರತಮ್ಯ ಮಾಡುತ್ತಿರುವ ಶಾಸಕ ದೊಡ್ಡನಗೌಡ ಜಿ ಪಾಟೀಲರು . ಬೇಸತ್ತ ಬಡ ಆಶ್ರಯ ಕಾಲೊನಿಯ ನಿವಾಸಿಗಳು ತಮ್ಮ ನೋವನ್ನು ಮಾಜಿ ಶಾಸಕರಾದ ಡಾ.ವಿಜಯಾನಂದ ಎಸ್ ಕಾಶಪ್ಪನವರ ಬಳಿ ಹೇಳಿ ಮನವಿಯನ್ನು ಕೊಟ್ಟರು.

ಗುರುಲಿಂಗಪ್ಪ ಆಶ್ರಯ ಕಾಲನಿಯ ಪತ್ರ ವಂಚಿತರು ನೋವಿನಿಂದ ಮಾತನಾಡಿದರು.
ಹಕ್ಕುಪತ್ರ ವಿಷಯವಾಗಿ ಕಳೆದ ಎಂಟು ದಿನಗಳಿಂದ ಶಾಸಕರ ಮನೆಗೆ ಹೋಗಿ ಬರುತ್ತಿದ್ದೇವೆ .ಅವರ ಪಿಎ ನಾಳೆ ಬಾ ನಾಡಿದ್ದು ಬಾ ಅಂತ ಬರಿ ಸುಳ್ಳುಗಳನ್ನು ಹೇಳಿ ನಮಗೆ ಸತಾಯಿಸಿದ್ದಾರೆ ಹೊರತು ಸೌಜನ್ಯಕ್ಕೆ ಒಂದು ಒಳ್ಳೆಯ ಮಾತುಕೂಡ ಆಡಿಲ್ಲ.ಎಷ್ಟೋ ಸಲ ಫೋನ್ ಮಾಡಿದರೂ ಕೂಡ ಶಾಸಕರಾಗಲಿ ಅವರ ಪಿಎ ಆಗಲಿ ಫೋನ್ ರಿಸೀವ್ ಮಾಡ್ತಾ ಇಲ್ಲ .

ಇವಾಗ ನಮಗೆ ಹೇಳುತ್ತಿದ್ದಾರೆ ಆ ಜಾಗ ಗಾರ್ಡನ್ (ಪಾರ್ಕ್) ಮಾಡಲು ಇದೆ ಅಲ್ಲಿ ನಿಮಗೆ ವಾಸಮಾಡಲು ಜಾಗ ಇಲ್ಲ ಎಂದು ಹೇಳುತ್ತಿದ್ದಾರೆ .ಆದ್ರೆ ನಾವು ಆ ಜಾಗದಲ್ಲಿ ೨೦ ವರ್ಷಗಳಿಂದ ನಾವು ವಾಸಮಾಡತಿದ್ದೀವಿ.
ಆದರೆಅಲ್ಲಿ ವಾಸವಿಲ್ಲದೆ ಬೀಗ ಹಾಕಿದ ಮನೆಗಳಿಗೆ ಹಕ್ಕುಪತ್ರ ಬಂದಿವೆ .ಆದರೆ ಬೀಗ ಹಾಕದೆ ಅಲ್ಲೆ ವಾಸವಿರುವ ನಮ್ಮ ಬಡ ಜನರಿಗೆ ಹಕ್ಕುಪತ್ರ ಬಂದಿಲ್ಲ . ಚುನಾವಣೆ ಬಂದಾಗ ಮಾತ್ರ ಇವರು ನಮ್ಮವರು ,
ಗೆದ್ದ ತಕ್ಷಣ ಇವನಾರವ ಇವನಾರವ ಎಂದು ಹೇಳುವ ಶಾಸಕರು.

ಗುರುಲಿಂಗಪ್ಪ ಆಶ್ರಯ ಕಾಲೊನಿ ನಿವಾಸಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕರಾದ ಡಾ.ವಿಜಯಾನಂದ ಎಸ್ ಕಾಶಪ್ಪನವರು ಇಳಕಲ್ ವ್ಯಾಪ್ತಿಗೆ ಸೇರಿದ ಸುಮಾರು ೪೦ ಎಕರೆ ಪ್ರದೇಶದಲ್ಲಿ ೧೫೪೨ ನಿವೇಶನ ಗಳ ಹಂಚಿಕೆ ಕೆಲಸ ಬಾಕಿ ಉಳಿದಿದೆ. ಅದರಂತೆ ಗುರುಲಿಂಗಪ್ಪ ಆಶ್ರಯ ಕಾಲೊನಿ ಪ್ಲಾಟನಲ್ಲಿ ೧೯೯ ಹಕ್ಕುಪತ್ರ ನೀಡುವ ಕೆಲಸ ಬಾಕಿ ಇದೆ.ಈ ಎಲ್ಲಾ ಹಕ್ಕುಪತ್ರ ನೀಡುವಂತೆ ಶಾಸಕರಿಗೆ ಆಗ್ರಹಿಸುತ್ತೆನೆ.ನಿರ್ಧಿಷ್ಟ ಸಮಯದಲ್ಲಿ ಹಕ್ಕುಪತ್ರ ವಿತರಿಸದಿದ್ದಲ್ಲಿ ಫಲಾನುಭವಿಗಳು ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಇನ್ನು ಮುಂದಾದರೂ ಶಾಸಕರು ಆಶ್ರಯ ಕಾಲೋನಿ ಹಕ್ಕುಪತ್ರಗಳನ್ನು ವಿತರಿಸಲು ತಾರತಮ್ಯ ಮಾಡದೆ ನಿಜವಾದ ಬಡಜನತೆಗೆ ಹಕ್ಕುಪತ್ರ ವಿತರಿಸಲು ಮುಂದಾಗುತ್ತಾರೋ ಕಾದು ನೋಡಬೇಕಾಗಿದೆ . ಬಡ ಕೂಲಿ ಕಾರ್ಮಿಕರಿಗೆ, ನೇಕಾರರಿಗೆ ಒಳ್ಳೆಯದಾಗಬೇಕೆನ್ನುವುದೇ ನಮ್ಮ ಭಾವನಾ ಟಿವಿಯ ಆಶಯವಾಗಿದೆ .

ವರದಿ : ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್

error: