ಇಳಕಲ್: ಪ್ರತಿ ವರ್ಷದಂತೆ ಈ ವರ್ಷವು ಹರಿಹರದ ತುಂಗಭದ್ರಾನದಿಗೆ ಬಾಗಿನ ಸಮರ್ಪಣೆಯು ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ಸಾನಿದ್ಯದಲ್ಲಿ ಎರಡು ಬಾಗಿನವನ್ನು ನದಿಗೆ ಬಿಡುವ ಸಂಪ್ರದಾಯವನ್ನು ಮಾಡುತ್ತಾ ಬಂದಿದ್ದು ಈ ವರ್ಷದ ವಿಶೇಷ ವೆಂದರೆ ೫ ಬಾಗಿನವನ್ನು ಮಾಡಿದ್ದೆವು ೨ ದಾವಣಗೆರೆ ಇಂದ ೨ ಹರಪನಹಳ್ಳಿ ೧ ರಾಣೆಬೆನ್ನೂರು ನಿಂದ ಬಾಗಿನವನ್ನು ಮಾಡಿ ಒಂದು ಬಾಗಿನವನ್ನು ನದಿಗೆ ಸಮರ್ಪಣೆ ಮಾಡಿ ಉಳಿದ ನಾಲ್ಕು ಬಾಗಿನವನ್ನು ನಮ್ಮ ಸಮಾಜದ ಮುತ್ತೈದೆಯರಿಗೆ ಸಾವಿತ್ರಿ ವಾಣಿ ಶಿವಣ್ಣ, ವಸಂತ ಉಲ್ಲತಿ, ರಶ್ಮಿ ನಾಗರಾಜ್ , ಚೆನ್ನಮ್ಮ ಇವರುಗಳಿಗೆ ನಾಲ್ಕು ಬಾಗಿನ ಕೊಟ್ಟು ಎಲ್ಲ ಮುತ್ತೈದೆಯರಿಗೆ ಅರಿಶಿನ-ಕುಂಕುಮವನ್ನು ಉಡಿಯನ್ನು ಕೊಡಲಾಯಿತು ಎಲ್ಲರೂ ಸಂತೋಷದಿAದ ಪೂಜೆಯನ್ನು ನೆರವೇರಿಸಿ ತಾಯಿಯ ಕೃಪೆಗೆ ಪಾತ್ರರಾದರು.
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ