ಇಳಕಲ್ ಇಳಕಲ್ ನಗರದ ವಾರ್ಡನಂ ೩ ಲಕ್ಷ್ಮೀಗೌಡರ ಪೇಟೆಯಲ್ಲಿಯ ನಾರಾಯಣ ಚಿತ್ರಮಂದಿರ ಹತ್ತಿರದ ಹಸಿರೆ ಉಸಿರಾಗಿಸಿಕೊಂಡ ಪರಿಸರ ಪ್ರೇಮಿ, ಪತ್ರಕರ್ತರಾದ ವಿನೋದ ಬಾರಿಗಿಡದ ಅವರ ಮನೆಯ ಮುಂದೆ ಇರುವ ಸುಮಾರು ೨೦ ವರ್ಷದಿಂದ ಶ್ರೀಗಂಧದ ಮರವನ್ನು ಬೆಳೆಸಿದ್ದರು.ಆ ಶ್ರೀಗಂಧ ಮರವನ್ನು ಬೆಳಗಿನ ಜಾವ ಅಮಾನುಷವಾಗಿ ಕಡೆದು ಕಳ್ಳತನ ಮಾಡಿದ್ದಾರೆ.
ಶಾಲಾಮಕ್ಕಳಿಗೆ ಶ್ರೀಗಂಧ ಮರ ನೋಡಲು ಕಾಡಿಗೆ ಹೋಗಬೇಕಾಗಿತ್ತು ಆದರೆ ಇದು ನಗರದಲ್ಲಿಯೆ ಕಾಣಲು ವಿಧ್ಯಾರ್ಥಿಗಳಿಗೆ ಅನುಕೂಲವಾಗಿತ್ತು .
ಯಾರೋ ಶ್ರೀಗಂಧದ ಮರದ ಕದಿಮರಿಂದ ಅಮಾನುಷವಾಗಿ ಕಡೆದು ಕಳ್ಳತನದಿಂದ ಮರವನ್ನು ಒಯ್ದ ಕಾರಣ ವಿಧ್ಯಾರ್ಥಿಗಳಿಗೆ ಗಂಧದ ಗಿಡವನ್ನು ನೋಡಲು ವಂಚಿತರಾಗಿದ್ದಾರೆ.
ಇದೆ ರೀತಿ ಒಂದವರ್ಷದ ಹಿಂದೆ ಜೋಶಿಗಲ್ಲಿಯಲ್ಲಿ ಮತ್ತು ಶ್ರೀ ಮಹಾಂತ ಕತೃಗದ್ಧುಗೆಯ ಹಿಂದೆ ಈ ಕೃತ್ಯ ನಡೆದಿದ್ದು ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯವರು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.ಊರಿನ ಮಧ್ಯದಲ್ಲಿನ ಮನೆಯ ಮುಂದಿರುವ ಗಿಡವನ್ನು ಅಮಾನುಷವಾಗಿ ಕಡೆದು ಕಳವು ಮಾಡುವ ರೀತಿ ನೋಡಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ .ಶ್ರೀಗಂಧ ಕಳ್ಳರನ್ನು ಬಂಧಿಸಲು ಯಶಸ್ವಿಯಾಗಲಿ ಆ ಕಳ್ಳರಿಗೆ ಸರಿಯಾದ ಶಿಕ್ಷೆ ಕೊಡಲಿ ಎಂದು ಪರಿಸರ ಪ್ರೆ?ಮಿಗಳು ಹಾಗೂ ನಗರ ಸಾರ್ವಜನಿಕರ ಅಭಿಪ್ರಾಯವಾಗಿದೆ .
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ