December 20, 2024

Bhavana Tv

Its Your Channel

ಶ್ರೀ ವಿಜಯ ಮಹಾಂತ ಶರಣ ಸಂಸ್ಕೃತಿ ಮಹೋತ್ಸವ ಸರಳವಾಗಿ ಆಚರಣೆ.

ಇಳಕಲ್ : ಮಹಾಮಾರಿ ಕರೋನಾ ಮೂರನೇ ಅಲೆಯ ಭೀತಿಯಲ್ಲಿ ಸರಕಾರದ ನಿಯಮಗಳ ಹಿನ್ನಲೆಯಲ್ಲಿ ಶ್ರಾವಣ ಮಾಸದ ಕಡೆಯ ಮಂಗಳವಾರ ಚಿತ್ತರಗಿ ಇಳಕಲ್ ಲಿಂ. ಪೂಜ್ಯ ಮಹಾದಾಸೋಹಿ, ಪರಮ ತಪಸ್ವಿ ವಿಜಯ ಮಹಾಂತಸ್ವಾಮಿಗಳವರ ಶ್ರೀ ಮಠದ ಆವರಣದಲ್ಲಿಯೇ ಬೆಳಗಿನ ಜಾವ ಐದು ಘಂಟೆಗೆ ಬಸವಾದಿ ಪ್ರಮಥರ ವಚನ ಕಟ್ಟನ್ನು ಹೊತ್ತ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಸಂಕ್ಷೀಪ್ತವಾಗಿ ಆಚರಣೆ ಮಾಡಲಾಯಿತು.
ಶ್ರೀ ವಿಜಯ ಮಹಾಂತ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಬೆಳಗಿನ ಜಾವ ಸೇರಿದ ಹಲವಾರು ಭಕ್ತರು ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ವಚನದ ಕಟ್ಟನ್ನು ಹೊತ್ತು ಅಡ್ಡಪಲ್ಲಕ್ಕಿಯಲ್ಲಿ ಕುಳಿಸಿದರು ಅಡ್ಡಪಲ್ಲಕ್ಕಿಗೆ ಭಕ್ತಾದಿಗಳು ಪೂಜೆ ಪುನಸ್ಕಾರ ಮಾಡಿ ಹೂಮಾಲೆ, ಕುಂಚಿಗೆಯನ್ನು ಹಾಕಿ, ಹಣ್ಣು ಹಂಪಲಗಳನ್ನು ಇಟ್ಟು ತಮ್ಮ ಭಕ್ತಿಯನ್ನು ಮೆರೆದರು.

ವರದಿ: ವಿನೋದ ಬಾರಿಗಿಡದ

error: