ಇಳಕಲ್: ರಾಮಥಾಳ ಹನಿ ನೀರಾವರಿ ಯೋಜನೆಯಡಿ ಪ್ರಪ್ರಥಮ ಬಾರಿಗೆ ತಾಲ್ಲೂಕಿನ ಬಿಂಜವಾಡಿ ಗ್ರಾಮದ ರೈತರಾದ ರಾಯನ ಗೌಡ ಪಾಟೀಲ ಮತ್ತು ಬಸವರಾಜ್ ಹುಬ್ಬಳ್ಳಿ, ಹೊಲದಲ್ಲಿ ಅಧಿಕ ಇಳುವರಿಗಾಗಿ ಪ್ರೋಟೆಕ್ಟತರ್ ೬ಒಒ ಆಧುನಿಕ ಯಂತ್ರದ ಮೂಲಕ ಔಷಧಿ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಉದ್ಘಾಟಿಸಿದರು.
ಕೆಬಿಜೆಎನ್‌ಎಲ್, ಕೃಷಿ ಇಲಾಖೆ, ಅಮೃತ ರೈತ ಉತ್ಪಾದಕರ ಕಂಪನಿ, ಡಿಮ್ಯಾಕ್ ಯೋಜನೆಯ ಅನುಷ್ಠಾನ ಘಟಕ,ಯುಪಿಎಲ್ ವತಿಯಿಂದ ಜಂಟಿಯಾಗಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಅಮೃತ ರೈತ ಉತ್ಪಾದಕರ ಕಂಪನಿಯವರು ಈ ಪ್ರಾತ್ಯಕ್ಷಿತೆಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು.
ಈ ತಂತ್ರಜ್ಞಾನದ ಮೂಲಕ ಅಧಿಕ ಇಳುವರಿ ಪಡೆಯುವುದರೊಂದಿಗೆ ಹೆಚ್ಚಿನ ಆದಾಯ ಪಡೆಯಬಹುದು . ಈ ಕೃಷಿಯಲ್ಲಿ ಯಾಂತ್ರಿಕರಣದ ಸಿಂಪರಣೆ ಮೂಲಕ ಅಧಿಕ ಇಳುವರಿ ಪಡೆಯುವುದರೊಂದಿಗೆ ಕೃಷಿ ಕಾರ್ಮಿಕರ ಸಮಸ್ಯೆಯನ್ನು ಕಡಿಮೆ ಮಾಡಬಹುದು . ಬೆಳೆಗೆ ಸಿಂಪರಣೆಯನ್ನು ಯಂತ್ರದ ಮೂಲಕ ಮಾಡಬಹುದು.
ಇದನ್ನು ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆವಿಕೆಯ ಮುಖ್ಯಸ್ಥೆ ಡಾ.ಮೌನೇಶ್ವರಿ, ಕೃಷಿ ಉಪ ನಿರ್ದೇಶಕರಾದ ಕೊಂಡವಾಡ, ಹುನಗುಂದ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ಬಾಗಲಕೋಟೆಯ ತಾಲ್ಲೂಕಿನ ಎಲ್ಲ ಸಹಾಯಕ ಕೃಷಿ ನಿರ್ದೇಶಕರು. ನೆಟಫಿಮ್ ಮತ್ತು ಜೈನ ನೀರಾವರಿಯ ಹಿರಿಯ ಅಧಿಕಾರಿಗಳು ಮತ್ತು ರೈತರು ಡಿಮ್ಯಾಕ್ ಸಂಸ್ಥೆಯ ಯೋಜನ ವ್ಯವಸ್ಥಾಪಕರಾದ ಸುರೇಶ್ ಷಣ್ಮುಗಂ, ದೋನಿ ( ವಿಸ್ತರಣಾ ಅಧಿಕಾರಿ), ಶಿವ ಪ್ರಕಾಶ, ಜೂನಿಯರ್ ಅಗ್ರೋನಮಿಸ್ಟ್ ಪರಶುರಾಮ್, ಆಕಾಶ್ ಅಂಬಿಗಾರ್, ಅನಿಲ್ ಕುಮಾರ್ ಹಿರೇಮಠ , ವಿನಯ್ ಯೋಜನಾ ಅಧಿಕಾರಿ ಮಾನಸ ಗೌಡ ಅಧಿಕಾರಿಗ , ರೈತರಾದ ಅಜಯ್ ಆರ್.ಕೆ, ಭಾಗವಹಿಸಿದ್ದರು.
ಭಾವನಾ ಟಿವಿಗಾಗಿ ವಿನೋದ ಬಾರಿಗಿಡದ ಇಳಕಲ್ ತಾಲೂಕ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ