ಇಳಕಲ್ : ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾರತದ ಪ್ರಥಮ ಸಂಗ್ರಾಮದ ಬೆಳ್ಳಿಚುಕ್ಕಿ, ವೀರರಾಣಿ, ರಾಷ್ಟ್ರಮಾತೆ, ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ಭಾವಚಿತ್ರಕ್ಕೆ ಹೂ ಮಾಲಾರ್ಪಣೆಯೊಂದಿಗೆ ಪೂಜೆ ಸಲ್ಲಿಸಿ ವಿಜೃಂಭಣೆಯಿAದ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಸಂಗಣ್ಣ ಗದ್ದಿ ವಹಿಸಿ ಮಾತನಾಡಿ
ಉತ್ತರ ಭಾರತದ ಸ್ವಾತಂತ್ರ‍್ಯ ಹೋರಾಟಗಾರರಿಗೆ ದೊರೆತ ಆದ್ಯತೆ, ಮಹತ್ವ, ಪ್ರಚಾರ ಸಿಕ್ಕಷ್ಟು ದಕ್ಷಿಣ ಭಾರತದ ದೇಶಪ್ರೇಮಿಗಳಿಗೆ ದೊರೆಯದೆ ಇರುವುದು ದುರದೃಷ್ಟಕರ, ಚೆನ್ನಮ್ಮನವರ ಧರ್ಯ, ಸ್ಥೈರ್ಯ, ದೇಶಪ್ರೇಮ ಹಾಗೂ ಚನ್ನಮ್ಮನ ಮಾತೃ ಹೃದಯ, ತ್ಯಾಗ ನಮಗೆಲ್ಲ ಆದರ್ಶ ಮಾದರಿ ಎಂದು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು .
ಈ ಸಮಾರಂಭದಲ್ಲಿ ಶ್ರೀ ವಿಮವಿವ ಸಂಘದ ಆಡಳಿತಾಧಿಕಾರಿ ಪ್ರೊ.ಆರ್.ಎಂ.ಪಾಟೀಲ, ನಿವೃತ್ತ ಮುಖ್ಯ ಗುರುಗಳಾದ ಶ್ರೀ ಕೆ.ಡಿ.ವಂದಕುದರಿ, ಶಿಕ್ಷಕ ಸಿಬ್ಬಂದಿ ಎಂ.ಎಸ್.ಹಾಲಶೆಟ್ಟಿ, ವಿ.ಎಸ್.ಶೆಟ್ಟರ, ಎಂ.ಎಸ್.ಕುಲಕರ್ಣಿ, ಶ್ರೀಮತಿ. ಎಸ್.ಎಚ್.ಜೋಗಿನ,ವಿಜಯಲಕ್ಷ್ಮಿ ಲಾಳಿ ಗೀತಾಂಜಲಿ, ಸುಮಾ ಪಾಟೀಲ, ಶಿಕ್ಷಕೇತರ ಸಿಬ್ಬಂದಿ ಉಮೇಶ ಸಾಕ್ರೆ, ಜ್ಯೋತಿ ಸೂಡಿ, ಸುಶೀಲಾ ರಾಠೋಡ, ಬಸವರಾಜ ದಾಳಿ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿನಿಯರು ಹಾಜರಿದ್ದರು.
ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ