December 22, 2024

Bhavana Tv

Its Your Channel

ಇಳಕಲ್‌ನ ಚಂದನ ಎಂಟರಪ್ರೈಜಿಸ್ ಆಫೀಸಿನಲ್ಲಿ ಕಿತ್ತೂರು ಚೆನ್ನಮ್ಮ ೨೪೩ನೇ ಜಯಂತೋತ್ಸವ

ಇಳಕಲ್ : ಭಾರತದ ಪ್ರಥಮ ಸಂಗ್ರಾಮದ ಬೆಳ್ಳಿಚುಕ್ಕಿ, ರಾಷ್ಟ್ರಮಾತೆ, ವೀರರಾಣಿ ಕಿತ್ತೂರು ಚೆನ್ನಮ್ಮನವರ ೨೪೩ನೇ ಜಯಂತೋತ್ಸವವನ್ನು ಚಂದನ ಎಂಟರಪ್ರೈಜಿಸ್ ಆಫೀಸಿನಲ್ಲಿ ವೀರಮಾತೆ ಚನ್ನಮ್ಮತಾಯಿಯವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆಯೊಂದಿಗೆ ಆಚರಿಸಲಾಯಿತು.
ಉತ್ತರ ಭಾರತದ ಸ್ವಾತಂತ್ರö್ಯ ಹೋರಾಟಗಾರರಿಗೆ ದೊರೆತ ಆದ್ಯತೆ, ಮಹತ್ವ, ಪ್ರಚಾರ ಸಿಕ್ಕಷ್ಟು ದಕ್ಷಿಣ ಭಾರತದ ದೇಶಪ್ರೇಮಿಗಳಿಗೆ ದೊರೆಯದೆ ಇರುವುದು ದುರದೃಷ್ಟಕರ. ಚೆನ್ನಮ್ಮ ತಾಯಿಯವರು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಹೋರಾಟಗಾತಿ೯ ,
ಚೆನ್ನಮ್ಮ ತಾಯಿಯವರ ಧೈರ್ಯ ಸ್ಥೈರ್ಯ , ದೇಶಪ್ರೇಮ ನಮ್ಮ ಯುವಜನರಿಗೆ ಅದಶ೯ವಾಗಲಿ ಎಂದು ವೀರರಾಣಿ ಕಿತ್ತೂರು ಚೆನ್ನಮ್ಮ ಯುವ ಬಳಗದ ಅಧ್ಯಕ್ಷ ವಿನೋದ ಬಾರಿಗಿಡದ ಹೇಳಿದರು .
ಇದೇ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ನಿಂಗಮ್ಮ ಬೇವೂರ ಅವರು ಮಾತನಾಡಿ ೨೪೩ ನೇ ಜಯಂತೋತ್ಸವದ ಶುಭಾಶಯಗಳನ್ನು ಹೇಳಿ ನಾವೆಲ್ಲರೂ ವೀರಮಾತೆ ಕಿತ್ತೂರರಾಣಿ ಚೆನ್ನಮ್ಮ ತಾಯಿಯವರಂತೆ ಧೈರ್ಯ ಸ್ಥೈರ್ಯ , ದೇಶಪ್ರೇಮ ನಮ್ಮ ಜೀವನದಲ್ಲಿ ಅಳವಡಿಕೊಂಡು ಯಶಸ್ವಿಯಾಗೋಣ ಎಂದರು.
ಅಮ್ಮ ಸೆವಾ ಸಂಸ್ಥೆಯ ಕಾರ್ಯಧ್ಯಕ್ಷರಾದ ಪುರುಷೋತ್ತಮ ದರಕ, ಹಿರಿಯ ಪತ್ರಕತ೯ ಮಹಾಂತೇಶ ಗೊರಜನಾಳ, ದುಶ್ಯಮಾಧ್ಯಮದ ಶಿರಸಪ್ಪ ಪತ್ತಾರ ಮಾತನಾಡಿದರು. ವೀರರಾಣಿ ಕಿತ್ತೂರು ಚೆನ್ನಮ್ಮನವರ ೨೪೩ನೇ ಜಯಂತೋತ್ಸವದ ಅಂಗವಾಗಿ ಅಮ್ಮಾ ಸೇವಾಸಂಸ್ಥೆಯಲ್ಲಿನ ವೃದ್ದರಿಗೆ ಹಣ್ಣು ಹಂಪಲ ವಿತರಿಸಿದರು.
ಈ ಕಾಯ೯ಕ್ರಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಯುವ ಬಳಗದ ಬಸನಗೌಡ ಪಾಟೀಲ್,ವಕೀಲರಾದ ಮಲ್ಲು ಬಮಸಾಗರ ಅನೀಲ ತುಂಬಗಿ, ಮಲ್ಲು ಗದ್ದಿ, ಅನೀಲ ಹುನಗುಂದ, ನಿಂಗು ಕರಶಟ್ಟಿ, ಸಂಗಮೇಶ ಬಾರಿಗಿಡದ, ಪ್ರಶಾಂತ ಹುನಗುಂದ, ಪ್ರವೀಣ ಟೆಂಗುಟ್ಟಿ, ಅಂಬರೀಶ ಹುನಗುಂದ,ಗೌರಿಷ ಬೇವೂರ ಮತ್ತಿತರರು ಉಪಸ್ಥಿತರಿದ್ದರು.

ಭಾವನಾ ಟಿವಿಗಾಗಿ ವಿನೋದ ಬಾರಿಗಿಡದ ಇಳಕಲ್.

error: