December 22, 2024

Bhavana Tv

Its Your Channel

ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿಯವರಿಗೆ ಅದ್ದೂರಿ ಸ್ವಾಗತ

ಇಳಕಲ್ : ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಅವರನ್ನು ಹುನಗುಂದ ಹಾಗೂ ಇಳಕಲ್ ತಾಲ್ಲೂಕಿನ ಮಾದಿಗ ಸಮಾಜದ ವತಿಯಿಂದ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಅವರನ್ನು ಪ್ರಥಮ ಬಾರಿಗೆ ಇಳಕಲ್ ನಗರಕ್ಕೆ ಬಂದ ಸಚಿವರು ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ವಿನಯಕುಮಾರ್ ಮೇಲಿನಮನಿ ಅವರ ಮನೆಗೆ ಭೇಟಿ ನೀಡಿದರು.ಆಗ ಬಿಜೆಪಿಯ ಯುವ ನಾಯಕ ರಾಜುಗೌಡ ದೊಡ್ಡನಗೌಡ ಪಾಟೀಲ್ ಅವರನ್ನು ಸ್ವಾಗತ ಕೋರಿ ಬರಮಾಡಿಕೊಂಡರು.

ನAತರ ಬಿಜೆಪಿ ಮುಖಂಡ ಹಾಗೂ ಮಾದಿಗ ಸಮಾಜದ ಹಿರಿಯರಾದ ಲಕ್ಷ್ಮಣ್ ಚಂದ್ರಗಿರಿ ಅವರ ಮನೆಗೆ ಭೇಟಿ ನೀಡಿದರು.

ನಂತರ ರಾಜುಗೌಡರ ನೇತೃತ್ವದಲ್ಲಿ ಶ್ರೀಮಠಕ್ಕೆ ಭೇಟಿ ನೀಡಿ ಗುರುಮಹಾಂತ ಶ್ರೀಗಳ ಆಶೀರ್ವಾದ ಪಡೆದು, ಎಸ್ ಆರ್ ಕಂಠಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಹುನಗುಂದ್ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ ಪಾಟೀಲರ ಮನೆಗೆ ಭೇಟಿ ನೀಡಿದರು ನಂತರ ರಾಜುಗೌಡ ಪಾಟೀಲ್ ಅವರು ಸಚಿವರನ್ನು ಸನ್ಮಾನಿಸಿದರು.

ಶಾಸಕರ ಮನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಶೋಭಾ ಆಮದಿಹಾಳ ಹಾಗೂ ನಗರಸಭೆಯ ಬಿಜೆಪಿ ಸದಸ್ಯರ ಪರವಾಗಿ ಸಚಿವರನ್ನು ಸನ್ಮಾನಿಸಿದರು.

ನ೦ತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು ತಾಲ್ಲೂಕಿನ ಸಮಾಜದ ಬಾಂಧವರು ಹಾಗೂ ಬಿಜೆಪಿ ಹಾಗೂ ವಿವಿಧ ಪಕ್ಷದ ನಾಯಕರು ನನನ್ನು ಆತ್ಮೀಯವಾಗಿ ಬರಮಾಡಿಕೊಂಡರು ಎಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.

ಬಿಜೆಪಿ ಪಕ್ಷದ ಹಿರಿಯರು ಹಾಗೂ ಸಮಾಜದ ಮುಖಂಡರು .ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಹಾಂತೇಶ ಕುರಿ

error: