December 22, 2024

Bhavana Tv

Its Your Channel

ನವೆಂಬರ್ ೧೨ ರಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವವರೆಗೆ ಉಗ್ರ ಹೋರಾಟವನ್ನು ಮಾಡಲಾಗುವದು – ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ

ಇಳಕಲ್ ಆರ್,ವೀರಮಣಿ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿವೇಶನ ಫಲಾನುಭವಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇವಲ ಬಡಜನರಿಗೆ ಮೋಸ ಮಾಡುತ್ತಾ ಅವರಿಗೆ ಯಾವುದೇ ರೀತಿಯಿಂದ ಯಾವ ಸೌಲಭ್ಯವನ್ನು ಕೊಡದೇ ಮತ್ತು ಅವರಿಗೆ ಮಂಜೂರಾದ ನಿವೇಶನಗಳ ಹಕ್ಕು ಪತ್ರಗಳನ್ನು ತಾವೇ ಇಟ್ಟುಕೊಂಡಿದ್ದಾರೆ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವವರೆಗೆ ಹೋರಾಟ ಮಾಡಲಾಗುವದು ಎಂದು ಹೇಳಿದರು.
ಸಭೆಯಲ್ಲಿ ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಮಾಜಿ ಅಧ್ಯಕ್ಷ ವೆಂಕಟೇಶ ಸಾಕಾ, ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಂತಕುಮಾರ ಸುರಪುರ, ಮಹಾಂತೇಶ ನರಗುಂದ, ಮಹಾಂತೇಶ ಚಟ್ಟೇರ, ಮಹಾಂತೇಶ ಗುಳೇದಗುಡ್ಡ, ಮಹಾಂತೇಶ ಮಡಿವಾಳರ, ಶರಣಪ್ಪ ಆಮದಿಹಾಳ, ಶರೀಪ್ ಚೋಪದಾರ, ಮಹಮ್ಮದಬಾಗವಾನ ಕಂಡಕ್ಟರ್, ನಗರಸಭೆ ಸದಸ್ಯೆಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮೌಲೇಶ ಬಂಡಿವಡ್ಡರ, ರೇಷ್ಮಾ ಮಾರನಸಬರಿ, ಶರಣವ್ವ ತಿಮ್ಮಾಪೂರ, ಮತ್ತಿತರರು ಉಪಸ್ಥಿತರಿದ್ದರು.

ಭಾವನಾ ಟಿವಿಗಾಗಿ ವಿನೋದ ಬಾರಿಗಿಡದ ಇಳಕಲ್

error: