December 22, 2024

Bhavana Tv

Its Your Channel

ಇಳಕಲ್ ನಗರಸಭೆ ಅಧ್ಯಕ್ಷರಾಗಿ ಶೆಟ್ಟರ ಉಪಾಧ್ಯಾಕ್ಷರಾಗಿ ಗುಳೇದ ಆಯ್ಕೆ

ಇಳಕಲ್ : ೧೫೩ ವರ್ಷಗಳಷ್ಟು ಅತ್ಯಂತ ಹಳೆಯದಾದ ಇಳಕಲ್ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವಾಗಿದ್ದು ೧೩ ನೇ.ವಾರ್ಡಿನ ಆಯ್ಕೆ ಗೊಂಡ ಸದಸ್ಯ ಮಂಜುನಾಥ ಮಹಾಂತಪ್ಪ ಶೆಟ್ಟರ ಅಧ್ಯಕ್ಷರಾಗಿ, ಉಪಾಧ್ಯಾಕ್ಷ ಸ್ಥಾನವು ಹಿಂದುಳಿದ ವರ್ಗ “ಎ” ಗೆ ವಾರ್ಡ ನಂ. ೧೬ ರಿಂದ ಆಯ್ಕೆಗೊಂಡ ಗುರು ದತ್ತಾತ್ರೇಯ ಹನುಮಂತರಾವ್ ಗುಳೇದ ಉಪಾಧ್ಯಕ್ಷ ರಾಗಿ ಆಯ್ಕೆ ಗೊಂಡಿದ್ದಾರೆ.
ಮAಗಳವಾರ ನಗರಸಭೆಯ ಕಂಠಿ ಸಭಾಭವನದಲ್ಲಿ ಚುನಾವಣೆ ಪ್ರಕಿ೯ಯೆನಡೆಯಿತು .ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶೆಟ್ಟರ ಕಾಂಗ್ರೆಸ್‌ದಿAದ ಸುರೇಶ ಜಂಗಲ್ಲಿ.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗುಳೇದ ಮತ್ತು ಕಾಂಗ್ರೆಸ್ ದಿಂದ ರೇಶ್ಮಾ ಮಾರನಬಸರಿ ಸ್ಪರ್ಧೆಸಿದರು.
೩೧ ಸದಸ್ಯರ ಬಲವುಳ್ಳ ನಗರಸಭೆಗೆ ಬಿಜೆಪಿಯಿಂದ ೨೧ ಸದಸ್ಯರು ಕಾಂಗ್ರೆಸ್‌ದಿAದ ೮ ಸದಸ್ಯರು ಮತ್ತು ಜೆಡಿಎಸ್ ದಿಂದ ೨ ಸದಸ್ಯರು ಆಯ್ಕೆ ಗೊಡಿದ್ದರು ೨೪ ಮತಗಳಲ್ಲಿ ಶಾಸಕರ ೧ ಮತ ಸೇರಿದೆ. ಕಾಂಗ್ರೆಸ್ ಅಭ್ಯಥಿ೯ಗೆ ೮ ಮತಗಳು ಬಿದ್ದಿವೆ.
ಅಧ್ಯಕ್ಷರಾಗಿ ಶೆಟ್ಟರ ಉಪಾಧ್ಯಕ್ಷ ರಾಗಿ ಗುಳೇದ ಆಯ್ಕೆಗೊಂಡಿದ್ದಾರೆoದು ಚುನಾವಣಾಧಿಕಾರಿ ಘೋಷಿಸಿದರು.
ಭಾವನಾ ಟಿವಿಗಾಗಿ ವಿನೋದ ಬಾರಿಗಿಡದ ಇಳಕಲ್

error: