December 20, 2024

Bhavana Tv

Its Your Channel

ಕೇವಲ ಅಂಕಗಳಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಿ- ಲಕ್ಷ್ಮೀ ಚುಂಚಾ

ಇಳಕಲ್: ಕೇವಲ ಅಂಕಗಳಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಿ ,ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ.ಪರಿಶ್ರಮ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂದು ಎಂಟೆಕನಲ್ಲಿ ಬಂಗಾರದ ಪದಕ ವಿಜೇತೆ ಲಕ್ಷ್ಮೀ ಚುಂಚಾ ಗಾಯತ್ರಿ ಮಹಿಳಾ ಸಂಘದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕರೆ ನೀಡಿದರು.
ಮಕ್ಕಳು ಗುರುಗಳ-ತಂದೆ ತಾಯಿಗಳ ಮಾತನ್ನು ಪಾಲಿಸಿ ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಲು ಪ್ರಯತ್ನಿಸಿ ಎಂದು ಮಕ್ಕಳ ಮಾಸಿಕ ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದ ಕಾರ್ಯದರ್ಶಿ ವೀಣಾ ಮುಳವಳ್ಳಿ ಅಭಿಪ್ರಾಯ ಪಟ್ಟರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕುಮಾರಿ ಲಕ್ಷ್ಮೀ ಚುಂಚಾ ಇವರನ್ನು ಶಾಲೆಯ ಪರವಾಗಿ ಸತ್ಕರಿಸಲಾಯಿತು.
ಲಲಿತಾಬಾಯಿ ಸಪ್ಪರದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯಗುರು ಮಲ್ಲಿಕಾರ್ಜುನ ಇಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಡಳಿತಾಧಿಕಾರಿ ಟಿ.ಎಂ.ರಾಮದುರ್ಗ ಹಾಗೂ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು. ವೇದಾವತಿ ದಟ್ಟಿ ನಿರೂಪಿಸಿದರು. ಎಂ.ಎಸ್.ಕನ್ನೂರ ವಂದಿಸಿದರು.

ವರದಿ ವಿನೋದ ಬಾರಿಗಿಡದ ಇಳಕಲ್

error: