December 22, 2024

Bhavana Tv

Its Your Channel

ಕ.ಕಾ.ನಿ. ಪತ್ರಕರ್ತ ಸಂಘದಿOದ ಪಿಎಸ್ ಐ ಗೆ ಸತ್ಕಾರ

ಇಳಕಲ್ : ಕಳೆದ ನಾಲ್ಕು ತಿಂಗಳಿAದ ಖಾಲಿ ಇರುವ ಇಳಕಲ್ ಶಹರ ಪೊಲೀಸ್ ಠಾಣೆಗೆ ನೂತನ ಪಿ.ಎಸ್. ಐ. ನಿಯುಕ್ತಿಗೊಂಡಿರುವ ಶಿವರಾಜ ಬಿ. ನಾಯಕವಾಡಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಳಕಲ್ ತಾಲೂಕ ಘಟಕದ ಅಧ್ಯಕ್ಷ ವಿಜಯ ಬಸವರಾಜ ಗವಿಮಠ ಮತ್ತು ಸರ್ವ ಸದಸ್ಯರು ಸೇರಿ ಮಹಾ ಬೆಳಕು ಪುಸ್ತಕ ಕೊಟ್ಟು ಸತ್ಕರಿಸಿ ಗೌರವಿಸಿದರು .

ಹಿರಿಯ ಪತ್ರಕರ್ತರಾದ ಬಿ.ಬಾಬು, ಮಹಾಂತೇಶ ಗೊರಜನಾಳ, ಮಲ್ಲಣ್ಣ ಇಂದರಗಿ, ಬಸವರಾಜ ಮಠದ ಮತ್ತು ಸಂಘದ ಉಪಾಧ್ಯಕ್ಷ ವಿನೋದ ಬಾರಿಗಿಡದ ಮಾತನಾಡಿ ನಗರದಲ್ಲಿನ ಸಿಸಿ ಕ್ಯಾಮೆರಾಗಳು ಹಾಳಾಗಿವೆ ಅವುಗಳನ್ನು ದುರಸ್ತಿ ಗೊಳಿಸಿ ಮತ್ತು ತ್ರಿಬಲ್ ರೈಡ್ ಗಳ ಹಾವಳಿ ಹೆಚ್ಚಾಗಿದೆ ಅವರಿಗೆ ಕಡಿವಾಣ ಹಾಕಬೇಕು ಮತ್ತು ಇಳಕಲ್ ಠಾಣೆಗೆ ಸಿಬ್ಬಂದಿಗಳ ಕೊರತೆಯಿದೆ ಅದನ್ನು ಸರಿಪಡಿಸಬೇಕು ಮತ್ತು ನಗರದಲ್ಲಿ ರಾತ್ರಿ ಗಸ್ತು ತಿರುಗುವದರ ಬಗ್ಗೆ ಚರ್ಚಿಸಿದರು .

ನಗರ ಪಿ.ಎಸ್. ಐ ಶಿವರಾಜ ಬಿ ನಾಯಕವಾಡಿ ಅವರು ಪತ್ರಕರ್ತರಿಗೆ ಇದೇ ರೀತಿ ತಮ್ಮ ಸಲಹೆ ಸೂಚನೆಗಳು ನಮಗೆ ಮುಖ್ಯ ನೀವು ಯಾವುದೇ ಸಮಯದಲ್ಲಿ ನಮಗೆ ಕರೆ ಮಾಡಿದರೂ ನಾವು ಸ್ಪಂದಿಸುತ್ತೇವೆ ಎಂದು ಹೇಳಿದರು ಅತಿ ಶೀಘ್ರದಲ್ಲಿ ಸಿಸಿ ಕ್ಯಾಮೆರಾದ ರಿಪೇರಿ ಮತ್ತು ತ್ರಿಬಲ್ ರೈಡ್ ವಾಹನ ಸವಾರರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು .

ಹಿರಿಯ ಪತ್ರಕರ್ತರಾದ ಸಜ್ಜನ್ ರಾಜ್ ಮೆಹ್ತಾ , ಭೀಮಣ್ಣ ಗಾಣಿಗೇರ ಮತ್ತು ಸಚಿನ್ ಸಾಲಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ : ವಿನೋದ ಬಾರಿಗಿಡದ ಇಳಕಲ್

error: