ಇಳಕಲ್: ಹುನಗುಂದ ಪಟ್ಟಣದ ಕೃಷಿಮಾರುಕಟ್ಟೆಯಲ್ಲಿ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯಹಮಾಲಿ ಕಾರ್ಮಿಕರ ಫೆಡರೇಶನ (ರಿ) ವತಿಯಿಂದ ಹುನಗುಂದ ತಾಲೂಕಿನ ಹಮಾಲಿ ಕಾರ್ಮಿಕರ ಅಧ್ಯಕ್ಷ ರಾಜೇಸಾಬ ನಧಾಫ್ ಇವರ ಅಧ್ಯಕ್ಷತೆಯಲ್ಲಿ ತಮ್ಮವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ಮಾಡಲು ಬೆಳಗಾವಿ ಚಲೋ ಪೂರ್ವಭಾವಿ ಸಭೆ ನಡೆಸಲಾಯಿತು .
ಬೆಳಗಾವಿ ಚಲೋ ಪೂರ್ವ ಭಾವಿ ಸಭೆ ಉದ್ದೇಶಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ ಎ.ಪಿ.ಎಮ್. ಸಿ .ಕಾಯ್ದೆ
ವಾಪಸಾಗಬೇಕು,ವಸತಿಯೋಜನೆ ಜಾರಿ ಮಾಡಿ, ಭವಿಷ್ಯ ನಿಧಿ,ಪಿಂಚಣಿ ಜಾರಿಮಾಡಿ, ಸರ್ಕಾರದ ಅಧಿಸೂಚನೆಯಂತೆ ಕನಿಷ್ಠ ಕೂಲಿ ಜಾರಿಯಾಗಲಿ, ಬಾಕಿ ಉಳಿದಿರುವ ಕೋವಿಡ್ ಪರಿಹಾರ, ಎಪಿಎಮ್ ಸಿ ಕಾಯಕ ನಿಧಿಯಡಿ ನಿವೃತ್ತಿ ಪರಿಹಾರ,ಮರಣ ಪರಿಹಾರ,ವಿದ್ಯಾರ್ಥಿ ವೇತನ,ಈ-ಶ್ರಮ ಕಾಡು೯ದಾರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಈಡೇರಬೇಕೆಂದರು,ನಾವು ಒಗ್ಗೋಡಿದರೆ ಮಾತ್ರ ಪಡೆಯಲು ಸಾಧ್ಯ ಎಂದರು.
ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ ಸಂಧರ್ಭದಲ್ಲಿ ಹಸಿವನ್ನು ನೀಗಿಸಿ ಕೊಳ್ಳಲು ೧೭ ಪಡಿತರ ಸಾಮಗ್ರಿಗಳನ್ನು ಈಡೇರಿಸಿದರೆ ನಮ್ಮ ರಾಜ್ಯದಲ್ಲಿ ಕೇವಲ ನಾಲ್ಕೈದು ಮಾತ್ರ ಪೊರೈಸಿ ಕೈ ತೊಳೆದು ಕೊಂಡಿದೆ ಹಾಗಾಗಿ,ನಿದ್ದೆಗೆ ಜಾರಿದ ಸರ್ಕಾರಕ್ಕೆ ಬಡಿದೆಬ್ಬಿಸಲು ಎಲ್ಲ ಹಮಾಲಿ ಕಾರ್ಮಿಕರು ಡಿಸೆಂಬರ್ ೨೦ ಪ್ರಾರಂಭ ಗೊಳ್ಳುವ ಅಧಿವೇಶನಕ್ಕೆ ಎಲ್ಲರು ಬರುವಂತೆ ಮನವಿ ಮಾಡಿಕೊಂಡರು.
ಈ ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ ಗಂಜಿಹಾಳ ಸದಸ್ಯರಾದ ನಿಂಗಪ್ಪಸೂಡಿ, ನಿಂಗಪ್ಪ ಮಾನಳ್ಳಿ,ಮಹಾಂತೇಶ ಹಂಡಿ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು .
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ