December 22, 2024

Bhavana Tv

Its Your Channel

ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಇಳಕಲ್: ರಾಷ್ಟೀಯ ಕಲೋತ್ಸವ ೨೦೨೧ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆ ಚಿಕ್ಕಆದಾಪುರ ಮೂರು ವಿದ್ಯಾರ್ಥಿಗಳು ಮತ್ತು ಕರಡಿ ಪ್ರೌಢಶಾಲೆಯ ಒಂದು ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ ಎಂದು ಶಿಕ್ಷಣ ಸಂಯೋಜಕರಾದ ಈಶ್ವರ ಅಂಗಡಿ ತಿಳಿಸಿದ್ದಾರೆ.

ದೃಶ್ಯಕಲೆ 2D(ಪೇಂಟಿoಗ್ )ಸಂಗಮೇಶ ನಂದವಾಡಗಿ, ಆಟಿಕೆಗಳ ಗೊಂಬೆ ತಯಾರಿಕೆಯಲ್ಲಿ ಮುತ್ತಣ್ಣ ಕತ್ತಿ , ಜಾನಪದ ನೃತ್ಯ ದಲ್ಲಿ ನಿರುಪಾದಿ ಮಾದರ & ಹಾಗೂ ಸರಕಾರಿ ಪ್ರೌಢಶಾಲೆಯ ಮೈತ್ರಾ ಗೌಡರ ದೃಶ್ಯಕಲಾ (ಮಣ್ಣಿನ ಮಾದರಿ )ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ .

ಈ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಮಾರ್ಗದರ್ಶನ ಮಾಡಿದ ಚಿತ್ರಕಲಾ ಶಿಕ್ಷಕ ಸಿ.ಡಿ. ಸರೋದೆ ಮತ್ತು ಕರಡಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಕೆ.ಐ. ಕನಸಾವಿ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಅಭಿವದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಮುಖ್ಯ ಗುರುಗಳು ಮತ್ತು ಸಿಬ್ಬಂದಿ ಯವರು ಅಭಿನಂದಿಸಿದ್ದಾರೆ.

ವರದಿ: ವಿನೋದ ಬಾರಿಗಿಡದ ಇಳಕಲ್

error: