December 22, 2024

Bhavana Tv

Its Your Channel

ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಬಂಜಾರ ಸಮಾಜದ ವತಿಯಿಂದ ತಹಶಿಲ್ದಾರಗೆ ಮನವಿ.

ಇಳಕಲ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ತಾಂಡ ಬಂಜಾರ ಸಮಾಜದ ಅಪ್ರಾಪ್ತಬಾಲಕಿಯಾದ ಕುಮಾರಿ ರಂಜಿತಾ ಸುರೇಶ ರಾಠೋಡ ದಿನಾಂಕ ೧೦/೧೨/೨೦೨೧ ರಂದು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಮಾಡಲಾಗಿದೆ.
ಈ ದಕ್ಕೆಗೆ ಸಂಬAಧಿಸಿದAತೆ ಈಗಾಗಲೆ ದಿನಾಂಕ ೧೧/೧೨/೨೦೨೧ ರಂದು ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಕೃತ್ಯದಲ್ಲಿ ಬಾಗಿಯಾದ ಸಂಜು ಹುಲ್ಲೂರ ಮತ್ತು ಇತರರನ್ನು ಈ ಕೂಡಲೇ ಬಂಧಿಸಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಿ ಕೂಡಲೇ ಅವರಿಗೆ ಗಲ್ಲು ಶಿಕ್ಷೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೆಕು
ಮತ್ತು ಸಂತೃಸ್ಥ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೊಡಬೆಕು, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಕೊಡದೆ ಇದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ .
ನಮ್ಮ ಬಂಜಾರ ಸಮಾಜದ ಎಲ್ಲ ಶಾಸಕರು ಮತ್ತು ಸಚಿವರು ಈ ಬಗ್ಗೆ ಸದನದಲ್ಲಿ ಚರ್ಚಿಸಬೇಕು ಎಂದು ಇಳಕಲ್ ತಾಲೂಕಿನ ಜಂಜಾರ ಸಮಾಜದ ಅಧ್ಯಕ್ಷ ಕೃಷ್ಣಾ ರಾಠೋಡ ಆಗ್ರಹಿಸಿದರು
.
ವರದಿ: ವಿನೋದ ಬಾರಿಗಿಡದ ಇಳಕಲ್

error: