December 22, 2024

Bhavana Tv

Its Your Channel

ಇಳಕಲ್ ತಹಶೀಲ್ದಾರರಾಗಿ ಬಸವರಾಜ ಮೆಳವಂಕಿ ಅಧಿಕಾರ ಸ್ವೀಕಾರ

ಇಳಕಲ್ : ನೂತನ ಇಳಕಲ್ ತಾಲೂಕಿಗೆ ತಹಶೀಲ್ದಾರರಾಗಿ ಬಸವರಾಜ ಎಮ್. ಮೆಳವಂಕಿ ಸೋಮವಾರದಂದು ಅಧಿಕಾರ ಸ್ವೀಕರಿಕೊಂಡಿದ್ದಾರೆ.
ಕಳೆದ ಆರು ತಿಂಗಳಿoದ ಹುನಗುಂದ ತಹಶೀಲ್ದಾರ ಬಸವರಾಜ ನಾಯ್ಕೋಡಿ ಅವರು ಪ್ರಭಾರಿ ಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಖಾಲಿಯಿದ್ದ ಈ ಹುದ್ದೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಿಂದ ವರ್ಗವಾಗಿ ಬಂದ ಬಸವರಾಜ ಮೆಳವಂಕಿ ಅಧಿಕಾರ ಸ್ವೀಕಾರಿಸಿದ್ದಾರೆ.
ನೂತನ ತಹಶೀಲ್ದಾರರಿಗೆ ಚಂದನ ಪೌಂಡೇಶನ್ ವತಿಯಿಂದ ಅಧ್ಯಕ್ಷ ವಿನೋದ ಬಾರಿಗಿಡದ ಹಾಗೂ ಹಿರಿಯ ಪತ್ರಕರ್ತರಾದ ಮಹಂತೇಶ ಗೊರಜನಾಳ, ,ಮಹಾಂತೇಶ ಯಲಬುರ್ತಿ, ಶರಣಗೌಡ ಕಂದಕುರ, ನಭಿಸಾಭ ಹುಣಚಗಿ ಮೊದಲಾದವರು ಸತ್ಕರಿಸಿ ಸ್ವಾಗತಿಸಿಕೊಂಡರು.

ವರದಿ: ವಿನೋದ ಬಾರಿಗಿಡದ ಇಳಕಲ್

error: