ಇಳಕಲ್:- ಇಟ್ಟಂಗಿ ಧೂಳು ಮತ್ತು ಇಟ್ಟಂಗಿ ಸುಡುವ ವಾಸನೆಯಿಂದ ಶಾಲೆ ಮಕ್ಕಳ ಮೇಲೆ ಮತ್ತು ಇಲ್ಲಿನ ಸಾರ್ವಜನಿಕರ ಮೇಲೆ ದುಷ್ಟಪರಿಣಾಮ ಬೀರುತ್ತಿದ್ದರಿಂದ ಇಳಕಲ್ ನಗರದ ಗೌಳೇರ ಗುಡಿ ಇಲ್ಲಿಯ ಸಾರ್ವಜನಿಕರು ಮುತ್ತಿಗೆ ಹಾಕಿರೋದು ಘಟನೆಯು ನಡೆದಿದೆ .
ಸುಮಾರು ವರ್ಷಗಳಿಂದ ಇಲ್ಲಿ ಇಟ್ಟಂಗಿ ಬಟ್ಟಿ ಇದ್ದು ಇದರಿಂದ ಬರುವ ವಾಸನೆ ಮತ್ತು ಧೂಳು ಜನರಗೆ ಸಾಕಾಗೋಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು 30 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ ಹತ್ತಿರವೆ ಇಟ್ಟಂಗಿ ಬಟ್ಟಿ ಇದ್ದು ಶಾಲಾ ಮಕ್ಕಳಿಗೂ ಮತ್ತು ಶಾಲೆಯ ಗುರುಗಳಿಗೆ ಈ ಇಟ್ಟಂಗಿ ಬಟ್ಟಿ ಯಿಂದ ಬರುವ ಧೂಳಿನಿಂದ ಸಾಕಷ್ಟು ತೊಂದರೆಯಾಗಿ ವಿದ್ಯಾರ್ಥಿಗಳು ಆಸ್ಪತ್ರೆಗೆ ಸೇರಿದ್ದಾರೆ .
ಶಾಲಾ ಆವರಣದ ಗಿಡಗಳ ಮೇಲೆ, ಬಿಸಿ ಊಟದ ಕೋಣೆಯಲ್ಲಿ ,ವಿದ್ಯಾರ್ಥಿಗಳು ಕೂರುವ ಡೆಸ್ಕ್ ಗಳ ಮೇಲೆ, ಶಾಲಾ ಆಫೀಸಿನ ಟೇಬಲ್‌ಗಳ ಮೇಲೆ ಇಟ್ಟಂಗಿ ದೂಳು ತುಂಬಿ ಹೋಗಿದೆ ಎಂದು ಶಾಲೆಯ ಗುರುಗಳು ಮತ್ತು ಶಾಲೆಯ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವಾಡಿ9ನ ಮೆಂಬರ್ ಆದ ರೇಷ್ಮಾ ಮಾರನಬಸರಿ ಆವರು ಇಲ್ಲಿಯ ಶಾಲಾ ಮಕ್ಕಳಿಗೆ ಮತ್ತು ಆಸ್ಪತ್ರೆಯ ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ಹೇಳಿದರು .
ಶಾಲೆ ಮತ್ತು ಆಸ್ಪತ್ರೆಗೆಯ ಸ್ಥಳ ಪರಿಶೀಲನೆಗೆ ಬಂದ ಎ.ಇ.ಇ(ಪರಿಸರ )ಅಧಿಕಾರಿಯಾದ ಆನಂದ ಬದಿ ಮತ್ತು ಹಿರಿಯ ಆರೋಗ್ಯ ನಿರುಕ್ಷಕರಾದ ಪ್ರಭಾಕರ್ ಅವರು ಸ್ಥಳವನ್ನು ಮತ್ತು ಕೊಠಡಿಗಳನ್ನು ಪರಿಶೀಲನೆ ನಡೆಸಿದರು .
ಇನ್ನು ಮುಂದಾದರೂ ಸಂಬAಧಪಟ್ಟ ಅಧಿಕಾರಿಗಳು, ವಾಯುಮಾಲಿನ್ಯ ಅಧಿಕಾರಿಗಳು ಇಲ್ಲಿಯ ಶಾಸಕರರಾಗಲಿ ಈ ಇಟ್ಟಂಗಿ ಬಟ್ಟೆಗಳನ್ನು ಸ್ಥಳಾಂತರಗೊಳಿಸಿ ಶಾಲಾ ಮಕ್ಕಳಿಗೆ ಆಸ್ಪತ್ರೆಯ ರೋಗಿಗಳಿಗೆ ಉಸಿರಾಡಿಸಲು ಅನು ಮಾಡಿಕೊಡುತ್ತಾರೋ ಇಲ್ಲವೋ ಕಾದು ನೋಡಬೇಕು .
ವರದಿ: ವಿನೋದ ಬಾರಿಗಿಡದ .ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ