December 21, 2024

Bhavana Tv

Its Your Channel

ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ರವರ ದರ್ಗಾಕ್ಕೆ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಭೇಟಿ

ಬಾಗಲಕೋಟ ಜಿಲ್ಲೆಯ ಇಳಕಲ್ ತಾಲ್ಲೂಕಿನ ಭಾವೈಕ್ಯದ ಸಂಕೇತವಾದ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ರವರ 153ನೇ ಉರುಸ ಅಂಗವಾಗಿ ಹುನಗುಂದ ಮತಕ್ಷೇತ್ರದ ಜನಪ್ರಿಯ ,ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರು ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ರವರ ದರ್ಗಾಕ್ಕೆ ಭೇಟಿ ನೀಡಿ ಆರ್ಶಿವಾದ ಪಡೆದರು.

ಈ ಸಮಯದಲ್ಲಿ ದರ್ಗಾದ ಗುರುಗಳಾದ ಸೈಯದ್ ಶಹಾ ಮುರ್ತುಜಾ ಹುಸೇನಿ ಉಲ್ -ಖಾದ್ರಿ ಉರ್ಫ್ ಫೈಸಲ್ ಪಾಷಾ ಅವರಿಂದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರಿಗೆ ಗೌರವಿಸಿ ಸತ್ಕರಿಸಿ ಆಶೀರ್ವದಿಸಿದರು .
ಹಾಗೂ ದರ್ಗಾ ಕಮೀಟಿಯ ಸದಸ್ಯರು ಹಿರಿಯರು ಗೌರವಿಸಿ ಸತ್ಕರಿಸಿದರು .
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ,ಮೌಲೇಶ್ ಬಂಡ್ಡಿವಡ್ಡರ, ರಾಜು ಬನ್ನಿಗೋಳ,ಖಾಜಾಹುಸೇನ ಸೋನಾರ್, ಮುಖಂಡರಾದ ಅಬ್ಬು ಹಳ್ಳಿ, ಮುತ್ತಣ್ಣ ಕಲಗೋಡಿ, ಶಬ್ಬೀರ್ ಬಾಗವಾನ್ ಮೆಹಬೂಬ ಗದ್ವಾಲ್, ಯಲ್ಲಪ್ಪ ರಾಚಾಪುರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ವಿನೋದ ಬಾರಿಗಿಡದ ಇಳಕಲ್

error: