May 10, 2024

Bhavana Tv

Its Your Channel

ರಾಜ್ಯ ಮಟ್ಟದ ಒಂದು ದಿನದ ಜಿಲ್ಲಾಧ್ಯಕ್ಷರ ಕಾರ್ಯಗಾರ

ಬೆಳಗಾವಿ : ಪ್ರೊಪೆಷನಲ್ ಸೋಶಿಯಲ್ ವರ್ಕ್ ಅಸೂಸಿಯೇಷನ್ ಬೆಳಗಾವಿ ರಾಜ್ಯ ಮಟ್ಟದ ಒಂದು ದಿನದ ಜಿಲ್ಲಾಧ್ಯಕ್ಷರ ಕಾರ್ಯಗಾರ ಯುಕೆ 27 ತ್ರಿ ಸ್ಟಾರ್ ಹೋಟೆಲನಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾದ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳಗಾವಿ ಬಸವರಾಜ ವರವಟ್ಟೆ ಮಾತನಾಡಿ, ಈ ಸಂದರ್ಭದಲ್ಲಿ ಸಮಾಜಕಾರ್ಯ ತುಂಬಾ ಅವಶ್ಯಕತೆಯಿದೆ. ಸಮಾಜ ಕಾರ್ಯಕ್ಕೆ ಇತ್ತೀಚಿನ ದಿನಮಾನಗಳಲ್ಲಿ ಸಮಾಜ ಕಾರ್ಯದ ಅರಿವು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಮೂಡುತ್ತಿದೆ. ಸಮಾಜ ಕಾರ್ಯದ ವಿದ್ಯಾರ್ಥಿಗಳು ಇಲ್ಲಿ ಗಮನಿಸಬೇಕಾದ ಅಂಶವೇನೆAದರೆ ಇತ್ತೀಚಿನ ದಿನಮಾನಗಳಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ಆದರೆ ವೃತ್ತಿಪರ ಸಮಾಜ ಕಾರ್ಯ ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳುತ್ತಾ ಹಲವಾರು ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ನೇರವಾಗಿದ್ದು ಹೆಮ್ಮೆಯ ವಿಷಯ. ಸರಕಾರಿ ನೌಕರಿ ನಮಗೆ ಸಿಗಬೇಕು ಎನ್ನುವ ಮನೋಭಾವನೆ ಹೆಚ್ಚಾಗಿ ಇಟ್ಟುಕೊಳ್ಳದೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮನೋಭಾವನೆ ಇರಬೇಕು. ಸಾಮಾಜ ಕಾರ್ಯದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಆಕರ್ಷಣೆ ಸಮಾಜ ಕಾರ್ಯ ಅಧ್ಯಯನ ಕೋರ್ಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ನಮ್ಮಲ್ಲಿ ಬಿ.ಎಸ್.ಡಬ್ಲ್ಯೂ ಹಾಗೂ ಎಂ.ಎಸ್.ಡಬ್ಲ್ಯೂ ಎರಡೂ ಕೋರ್ಸ್ಗಳು ಇವೆ. ಈ ಕೋರ್ಸ್ ಮಾಡಿದವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಇರುವುದರಿಂದ ಈ ಕೋರ್ಸ್ಗೆ ಸೇರಲು ಹೆಚ್ಚಿನ ವಿದ್ಯಾರ್ಥಿಗಳು ಬಯಸುತ್ತಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ಸಂಘದ ವೇಬ್ ಸೈಟ್ ಚಾಲನೆ ನೀಡಿದ ಕಾರ್ಮಿಕ ಅಧಿಕಾರಿ ಮಾತನಾಡಿ, ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರದ್ದು ಮುಖ್ಯ ಪಾತ್ರ. ಸಾಮಾಜಿಕ ಸಮಸ್ಯೆಗಳಿಗೆ ಇವರು ಪರಿಹಾರ ಸೂಚಿಸುತ್ತಾರೆ. ಬಡತನ, ನಿರುದ್ಯೋಗ, ಅಸಮರ್ಪಕ ಆರೋಗ್ಯ, ಶಿಕ್ಷಣದ ಕೊರತೆ, ಮದ್ಯವ್ಯಸನಕ್ಕೆ ಒಳಗಾಗಿರುವುದು, ಡ್ರಗ್ ಸೇವನೆ ಇತ್ಯಾದಿಯಿಂದ ನರಳುತ್ತಿರುವವರಿಗೆ ಇವರು ಆಪ್ತ ಸಲಹೆ ನೀಡುವುದಲ್ಲದೇ, ಅವರಿಗೆಲ್ಲ ನೆರವು ನೀಡಬಲ್ಲರು. ಸಮಾಜಕಾರ್ಯ ಅಧ್ಯಯನವನ್ನು ಪದವಿ (ಬಿಎಸ್‌ಡಬ್ಲ್ಯೂ)ಹಾಗೂ ಸ್ನಾತಕೋತ್ತರ ಪದವಿಯಲ್ಲಿ (ಎಂಎಸ್‌ಡಬ್ಲ್ಯೂ) ಅಳವಡಿಸಲಾಗಿದೆ. ಬಿಎಸ್‌ಡಬ್ಲ್ಯೂ ಹಾಗೂ ಎಂಎಸ್‌ಡಬ್ಲ್ಯೂ ಕೋರ್ಸ್ ಮಾಡಿದವರು ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬಹುದು. ಸಮಾಜಕಾರ್ಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ನಂತರ ಇದೇ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳಬಹುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಅಥಿತಿಗಳಾದ ತಾಲೂಕು ಅಧಿಕಾರ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಬಸವರಾಜ ಕರಿಹುಲಿ , ಗ್ರಾಮ ವಿಕಾಸ ಸೊಸೈಟಿ ಜಗದೀಶ್ ನಾಯಕ್, ಶಿಶು ಅಭಿವೃದ್ಧಿ ಅಧಿಕಾರಿಗಳು, ಹುಕ್ಕೇರಿ ಮಂಜುನಾಥ್ ಪರಸನ್ನವರ ಮಾತನಾಡಿ, ಸಾಮಾಜಿಕ ತುಡಿತಕ್ಕೆ ಸಮಾಜಕಾರ್ಯ ಅಧ್ಯಯನ ಸಮಾಜ ಕಾರ್ಯ ಅಧ್ಯಯನ ಕೋರ್ಸ್ಗೆ ಇಂದು ಬೇಡಿಕೆ ಹೆಚ್ಚುತ್ತಿದೆ. ಇದೊಂದು ವೃತ್ತಿಪರ ಅಧ್ಯಯನ ಕೋರ್ಸ್ ಆಗಿದ್ದು, ಸಾಮಾಜಿಕ ಸಿದ್ಧಾಂತ ಹಾಗೂ ಸಂಶೋಧನಾ ವಿಧಾನಗಳು, ಜನ, ಗುಂಪು ಹಾಗೂ ಸಮಾಜ ಅಧ್ಯಯನ ಮಾಡುವ ನಿಟ್ಟಿನಲ್ಲಿ ಈ ಕೋರ್ಸ್ ಉಪಯುಕ್ತ. ಸಾಮಾಜಿಕ ಅಧ್ಯಯನ, ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವೃತ್ತಿಪರ ಕೋರ್ಸ್ ಇದಾಗಿದ್ದು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೇಕ ಮಾರ್ಗೋಪಾಯಗಳನ್ನು ತಿಳಿಸುತ್ತದೆ. ಇಂದಿನ ದಿನಗಳಲ್ಲಿ ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗಲು ಈ ಕೋರ್ಸ್ ಒಂದು ವೇದಿಕೆಯಾಗಿದೆ. ಇಂದಿನ ದಿನಗಳಲ್ಲಿ ಕಾಡುತ್ತಿರುವ ಬಡತನ ಸಮಸ್ಯೆಯನ್ನು ಹೇಗೆ ನಿರ್ಮೂಲನೆ ಮಾಡಬೇಕು. ಅಲ್ಲದೇ, ಮೂಲೆಗುಂಪಾಗಿರುವ ಅನೇಕ ಜನರನ್ನು ಸಮಾಜದ ಮುಖ್ಯವಾಹಿನಿಗೆ ಹೇಗೆ ತರಬೇಕು ಎಂಬುದರ ಮಾಹಿತಿಯನ್ನು ನೀಡಿ ಸಮಾಜ ಬದಲಾವಣೆಗೆ ಸಹಕಾರಿಯಾಗಿದೆ. ಅಲ್ಲದೆ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದಲಾವಣೆಗೆ ಹೋರಾಟದ ಹಾದಿಯನ್ನು ಸೂಚಿಸುತ್ತದೆ. ಸಮಾಜ ಕಾರ್ಯ ಅಧ್ಯಯನ ಎಂಬುದು ಹೃದಯ ವೈಶಾಲ್ಯ ಬಯಸುವ ಕೋರ್ಸ್. ಸಾಮಾಜಿಕ ಕಾರ್ಯಕರ್ತರಾಗ ಬಯಸುವವರು ಈ ಕೋರ್ಸ್ ಆಯ್ದುಕೊಳ್ಳಬಹುದು. ಈ ಕೋರ್ಸ್ ಮಾಡಿದವರು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲದೇ ಅಂತರರಾಷ್ಟ್ರೀಯ ಸಂಸ್ಥೆಗಳಾದ‘ಯುನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳಲ್ಲಿಯೂ ಉದ್ಯೋಗ ಕಂಡುಕೊಳ್ಳಬಹುದು ಎಂದರು…
ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಬಸವಪ್ರಕಾಶ ಮಹಾಸ್ವಾಮಿಗಳು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷ ದೀಪಕ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ರಾಜ್ಯ ಉಪಾಧ್ಯಕ್ಷ ಶಿವರಾಜ್ ಹೊಳೆಪ್ಪಗೋಳ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ, ಕಾರ್ಯದರ್ಶಿ ಕಲ್ಲಪ್ಪ ನಂದರಗಿ, ಹುಬ್ಬಳ್ಳಿ ಜಿಲ್ಲಾಧ್ಯಕ್ಷೆ ಸಹನಾ ಆಲೂರ, ಬೆಳಗಾವಿ ಜಿಲ್ಲಾಧ್ಯಕ್ಷ ಉಮೇಶ್ ಹಾರುಗೋಪ್ಪ, ಯಾದಗಿರಿ ಜಿಲ್ಲಾಧ್ಯಕ್ಷ ರಮೇಶ್ ಕಟ್ಟಿಮನಿ, ಬಾಗಲಕೋಟ ಕಾರ್ಯದರ್ಶಿ ಅಡಿವೆಪ್ಪ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ರಾಜ್ಯದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ಮಹೇಶ ಶರ್ಮಾ, ಬೆಳಗಾವಿ

error: