May 20, 2024

Bhavana Tv

Its Your Channel

ಕಾಗವಾಡದಲ್ಲಿ ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಮುಖಭಂಗ

ಕಾಗವಾಡದಲ್ಲಿ ಸ್ಥಳೀಯ ಪಂಚಾಯತಿ ಚುನಾವಣೆಯಲ್ಲಿ ಪುರಸಭೆ ಪಟ್ಟಣ ಪಂಚಾಯತಿಗೆ ಡಿ.೨೭ ರಂದು ಚುನಾವಣೆ ಜರುಗಿದ್ದವು ಆ ಚುನಾವಣೆಯ ಮತ ಏಣಿಕೆ ಕಾರ್ಯ ಗುರುವಾರ ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆಯಿತು

ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ನೇರ ಹಣಾಹಣಿಯಲ್ಲಿ ಸೆಣಸಾಡಿದ್ದವು ಐನಾಪೂರ ಪಟ್ಟಣ ಪಂಚಾಯತಿ ಹಾಗೂ ಉಗಾರ ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಇನ್ನೂ ಆಡಳಿತಾರೂಢ ಬಿಜೆಪಿ ಶೇಡಬಾಳ ಪಟ್ಟಣ ಪಂಚಾಯತಿ ಬಿಜೆಪಿ ತೆಕ್ಕೆಗೆ ಹಾಕಿಕೊಂಡು ಸಮಾಧಾನಕರಗೊಂಡಿದೆ

ಐನಾಪೂರ ಪಟ್ಟಣ ಪಂಚಾಯತಿಯ ೧೯ ಸ್ಥಾನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-೧೩ ಗೆಲುವು ಬಿಜೆಪಿ-೦೬ ರಲ್ಲಿ ಪ್ರತಿಸ್ಪರ್ಧಿಯಾಗಿದೆ,ಇನ್ನೂ ಉಗಾರ ಖುರ್ದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-೧೧,ಬಿಜೆಪಿ ೦೭,ಪಕ್ಷೇತರರು-೦೫ ರಲ್ಲಿ ಗೆಲುವು ಸಾಧಿಸಿದ್ದಾರೆ,ಇನ್ನೂ ಶೇಡಬಾಳ ಪಟ್ಟಣ ಪಂಚಾಯತಿ ಯಲ್ಲಿ ಬಿಜೆಪಿ-೧೧ ರಲ್ಲಿ,ಕಾಂಗ್ರೆಸ್-೦೨,ಜೆಡಿಎಸ್-೦೧,ಪಕ್ಷೇತರ-೦೧.ಒಟ್ಟಾರೆಯಾಗಿ ಕಾಗವಾಡ ತಾಲೂಕಿನಲ್ಲಿ ಉಗಾರ ಪುರಸಭೆ,ಐನಾಪೂರ ಪಟ್ಟಣ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ ಸೇರಿದರೆ ಶೇಡಬಾಳ ಪಟ್ಟಣ ಪಂಚಾಯತಿ ಬಿಜೆಪಿಗೆ ಒಲಿದಿದೆ

error: